ಬೆಂಗಳೂರು, ಏ 17 (DaijiworldNews/MS): ಚುನಾವಣೆ ಹೊಸ್ತಿಲಿನಲ್ಲಿ ಸರ್ಕಾರ ನೀಡಿದ್ದ ಸುಮಾರು 16 ಸಾವಿರ ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಟೆಂಡರ್ಗೆ ಚುನಾವಣಾ ಆಯೋಗ ತಡೆ ನೀಡಿದ್ದು ಇದರಿಂದ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.
ರಾಜ್ಯದ ಹಲವೆಡೆ ಹಲವು ಕಾಮಗಾರಿಗಳಿಗೆ ಸರ್ಕಾರ ತರಾತುರಿಯಲ್ಲಿ ಟೆಂಡರ್ ಕರೆದಿತ್ತು. ಈ ಬಗ್ಗೆ ಕಾಂಗ್ರೆಸ್ ನೀಡಿದ್ದ ದೂರು ಪರಿಶೀಲಿಸಿದ ಚುನಾವಣಾ ಆಯೋಗ ಇಡೀ ಟೆಂಡರ್ ಪ್ರಕ್ರಿಯೆ ತಡೆ ನೀಡಿದೆ.
ಅಷ್ಟೇಅಲ್ಲದೆ, ಮುಂದೆಯೂ ಯಾವುದೇ ಹೊಸ ಟೆಂಡರ್ ಕರೆಯಬಾರದೆಂದು ಕಾರ್ಯಾದೇಶ ನೀಡಬಾರದು ಎಂದು ಆಯೋಗ ಆದೇಶ ಹೊರಡಿಸಿದೆ.ಆಯೋಗದ ಆದೇಶದದಿಂದ ಸಿಎಂ ಬೊಮ್ಮಾಯಿ ಬಂಡವಾಳ ಬಯಲಾಗಿದ್ದು ಹೀಗಾಗಿ ಈಗಲಾದರೂ ಸಿಎಂ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಒತ್ತಾಯಿಸಿದ್ದಾರೆ.