ಮೈಸೂರು, ಏ 17 (DaijiworldNews/MS): ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಶಾಸಕ ಎಸ್.ಎ ರಾಮದಾಸ್ ಬಂಡಾಯವೇ ? ಪಕ್ಷೇತರರಾಗಿ ಸ್ಪರ್ಧೆಯೇ ಎಂಬ ಬಗ್ಗೆ ಇದು ಸಂಜೆ ಐದು ಗಂಟೆಗೆ ನಡೆಯಲಿರುವ ಸಭೆಯಲ್ಲಿ ತೀರ್ಮಾನವಾಗಲಿದೆ.
ರಾಮದಾಸ್ ಅವರ ಬದಲಿಗೆ ಹೊಸಮುಖ ಶ್ರೀವತ್ಸಗೆ ಪಕ್ಷ ಟಿಕೆಟ್ ನೀಡಿದ್ದು ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, 30 ವರ್ಷದಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಈಗ ಆ ಮನೆಯಲ್ಲಿ ಇರಬೇಕಾ ಬೇಡವಾ ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿಗೆ ಮೈಸೂರಿನಲ್ಲೂ ಬಂಡಾಯದ ಬಿಸಿ ಮುಟ್ಟಿಸುವ ಸುಳಿವು ನೀಡಿದ್ದಾರೆ.
ಆರು ಬಾರಿ ಕಣಕ್ಕಿಳಿದು ನಾಲ್ಕು ಬಾರಿ ಗೆದ್ದು ಶಾಸಕರಾದ ರಾಮದಾಸ್ ಅವರದು ಬಿಜೆಪಿಯಲ್ಲಿ ಹಿರಿಯ ನಾಯಕರಾಗಿದ್ದಾರೆ. ಇವರಿಗೆ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಕಾರ್ಯಕರ್ತರ ಒತ್ತಾಯವಿದೆ. ಇದರ ಸಂಬಂಧ ಚರ್ಚೆ ನಡೆಸಲು ರಾಮದಾಸ್ ಅವರು ಸಂಜೆ ಐದು ಗಂಟೆಗೆ ಸಭೆಯನ್ನು ಕರೆದಿದ್ದಾರೆ. ಅಲ್ಲಿ ಮುಂದೇನು ಎಂಬ ಬಗ್ಗೆ ತೀರ್ಮಾನ ನಡೆಯಲಿದೆ. ಅದರ ನಡುವೆ ರಾಮದಾಸ್ ಅವರನ್ನು ಸಮಾಧಾನ ಮಾಡುವ ಪ್ರಯತ್ನಗಳು ಕೂಡಾ ನಡೆಯುವ ಸಾಧ್ಯತೆಗಳಿವೆ.