ತಿರುವನಂತಪುರ, ಏ 17 (DaijiworldNews/MS): ಹೇರಳವಾದ ನದಿ, ತೊರೆ, ಹಿನ್ನೀರು ಹಾಗೂ ಉತ್ತಮ ಪ್ರಮಾಣದ ಮಳೆಯು ಕೇರಳವನ್ನು ಹಚ್ಚ ಹಸಿರನ್ನಾಗಿರಿಸಿದರೂ, ಈ ರಾಜ್ಯದ ಅನೇಕ ಭಾಗಗಳಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದಕ್ಕಾಗಿಯೇ ದೇಶದಲ್ಲೇ ಪ್ರಥಮ ಬಾರಿಗೆ ಕೇರಳದಲ್ಲಿ ನೀರಿಗಾಗಿ ಪ್ರತ್ಯೇಕ ಬಜೆಟ್ ಘೋಷಿಸಲಾಗಿದೆ.
ರಾಜ್ಯದ 15 ಬ್ಲಾಕ್ ಪಂಚಾಯತ್ ಗಳ 94 ಗ್ರಾಮ ಪಂಚಾಯತ್ ಗಳನ್ನು ಒಳಗೊಂಡ ಮೊದಲ ಹಂತದ ನೀರಿನ ಬಜೆಟ್ ನ ವಿವರಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಅನಾವರಣಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ "ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಎದುರಿಸಲು ಈ ಬಜೆಟ್ ಅನ್ನು ತರಲಾಗುತ್ತಿದೆ "ಎಂದು ಹೇಳಿದ್ದಾರೆ.
" ರಾಜ್ಯದ ಜಲಸಂಪನ್ಮೂಲಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ ಮತ್ತು ಆದ್ದರಿಂದ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳಲು ಮತ್ತು ವ್ಯರ್ಥವಾಗುವುದನ್ನು ತಡೆಯಲು ನೀರಿನ ಬಜೆಟ್ ಸಹಕಾರಿಯಾಗಲಿದೆ" ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಅಂತರರಾಷ್ಟ್ರೀಯ ಖ್ಯಾತಿಯ ಲಿಮ್ನಾಲಜಿಸ್ಟ್ ಮತ್ತು ಎಸ್ಸಿಎಂಎಸ್ ವಾಟರ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಡಾ.ಸನ್ನಿ ಜಾರ್ಜ್ "ಇದು ಕೊರತೆಯಿಂದಾಗುವ ಸಮಸ್ಯೆಯಲ್ಲ, ಇದು ನಿರ್ವಹಣಾ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.