ಬೆಂಗಳೂರು, ಏ 17 (DaijiworldNews/MS): ಉತ್ತರ ಪ್ರದೇಶದ ಉಮೇಶ್ ಪಾಲ್ನ ಹತ್ಯೆ ಪ್ರಕರಣದ ಆರೋಪಿ ಗುಡ್ಡು ಮುಸ್ಲಿಂ ಕರ್ನಾಟಕದಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ಅಲ್ಲಿನ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಎನ್ಕೌಂಟರ್ ಭೀತಿಯಿಂದ ಆತ ಕರ್ನಾಟಕದಲ್ಲಿ ಸುತ್ತಾಡುತ್ತಿದ್ದಾನೆ ಎಂದು ವರದಿಯಾಗಿದೆ.
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಗ್ಯಾಂಗ್ಸ್ಟರ್ ಅತೀಕ್ ಅಹಮ್ಮದ್ ತಾನು ಗುಂಡೇಟಿಗೆ ಬಲಿಯಾಗುವುದಕ್ಕೂ ಕೆಲವೇ ಕ್ಷಣಗಳ ಹಿಂದೆ ಗುಡ್ಡು ಮುಸ್ಲಿಂ ಕುರಿತು ಮಾತನಾಡಿದ್ದ. ಗುಡ್ಡು ಮುಸ್ಲಿಂ ಕೊನೆಯ ಮೊಬೈಲ್ ಟವರ್ ಲೋಕೇಶನ್ ಕರ್ನಾಟಕದಲ್ಲಿ ಪತ್ತೆಯಾಗಿತ್ತು.
ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರು ಮಂದಿ ಆರೋಪಿಗಳ ಪೈಕಿ ಗುಡ್ಡು ಕೂಡ ಇದ್ದಾನೆ. ಈತನನ್ನು ಹುಡುಕಿಕೊಂಡು ಯುಪಿ ಪೊಲೀಸರು ಕರ್ನಾಟಕಕ್ಕೂ ಬರುವ ಸಾಧ್ಯತೆಯಿದೆ.
ಭೂಗತ ಪಾತಕಿಗಳ ಜೊತೆಗೆ ನಂಟು ಹೊಂದಿರುವ ಗುಡ್ಡು ಮುಸ್ಲಿಂ ಹ್ಯಾಂಡ್ ಗ್ರೆನೇಡ್ ತಯತಯಾರಿಸಿ ಗ್ಯಾಂಗ್ ಸ್ಟಾರ್ ಗಳಿಗೆ ಸರಬರಾಜು ಮಾಡುತ್ತಿದ್ದ.