ಮಧ್ಯಪ್ರದೇಶ, ಏ17 (DaiiworldNews/HR): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 1.1 ಕೋಟಿ ರೂ. ದೇಣಿಗೆ ನೀಡಿದ್ದ ಖ್ಯಾತ ಸಂತ ಮಹಾಂತ್ ಕನಕ ಬಿಹಾರಿ ಮಹಾರಾಜ್ ಅವರು ಸೇರಿದಂತೆ ಕಾರು ಚಾಲಕ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ನರಸಿಂಗ್ಪುರದಲ್ಲಿ ನಡೆದಿದೆ.
ಮಹಾಂತ್ ಅವರು ಪ್ರಯಾಗರಾಜ್ನಿಂದ ಛಿಂದ್ವಾರದಲ್ಲಿರುವ ತಮ್ಮ ಆಶ್ರಮಕ್ಕೆ ತೆರಳುತ್ತಿದ್ದಾಗ ಬರ್ಮನ್ ಸಗ್ರಿ ಬಳಿಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಇನ್ನು ಘಟನೆ ನಡೆದ ಕೂಡಲೇ ಅಲ್ಲಿದ್ದ ಸ್ಥಳೀಯರು ಮಹಾಂತ್ ಸೇರಿ ಮೂವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಮಹಾಂತ್ ಹಾಗೂ ಕಾರು ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.