ಪಂಜಾಬ್, ಏ 17 (DaijiworldNews/MS): ಪಂಜಾಬ್ ನ ಬಟಿಂಡಾ ಸೇನಾ ನೆಲೆಯಲ್ಲಿ ನಾಲ್ವರು ಯೋಧರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸೇನಾ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ದೇಸಾಯಿ ಮೋಹನ್ ಎಂದು ಗುರುತಿಸಲಾಗಿದೆ.
"ವೈಯಕ್ತಿಕ ದ್ವೆಷದ ಹಿನ್ನಲೆಯಲ್ಲಿ ನಾಲ್ವರು ಯೋಧರ ಹತ್ಯೆ ಮಾಡಲಾಗಿದೆ. ಪ್ರಾಥಮಿಕ ತನಿಖೆಗಳು ಇದು ವೈಯಕ್ತಿಕ ಹಗೆತನದಿಂದ ಸ್ಪಷ್ಟವಾಗಿ ಕಂಡುಬಂದಿದೆ. ಸೇನಾ ಯೋಧನು ಐಎನ್ಎಸ್ಎಎಸ್ ರೈಫಲ್ ಅನ್ನು ಕದ್ದು ತನ್ನ ನಾಲ್ವರು ಸಹೋದ್ಯೋಗಿಗಳನ್ನು ಕೊಂದಿದ್ದನ್ನು ಪೊಲೀಸರಿಗೆ ಒಪ್ಪಿಕೊಂಡಿದ್ದಾನೆ " ಭಟಿಂಡಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಸಿಂಗ್ ಖುರಾನಾ ಹೇಳಿದ್ದಾರೆ.
ಏಪ್ರಿಲ್ 12 ರಂದು ಬಟಿಂಡಾದ ಮಿಲಿಟರಿ ನೆಲೆಯಲ್ಲಿ ಮುಂಜಾನೆ ನಡೆದ ಫೈರಿಂಗ್ ನಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದರು. ಈ ದಾಳಿ ಮಾಡಿದಾತ ಮೊದಲು ಉಗ್ರರು ಎಂದು ವರದಿಯಾಗಿತ್ತು. ಸಿವಿಲ್ ಡ್ರೆಸ್ ನಲ್ಲಿ ಇದ್ದಾತ ಫೈರಿಂಗ್ ಮಾಡಿದ್ದ.