ಬೆಂಗಳೂರು, ಏ 17 (DaijiworldNews/MS): ಸರಳ ಸಜ್ಜನಿಕೆಯ ಶ್ರೇಷ್ಟ ರಾಜಕಾರಣಿ; ಸೋಲಿಲ್ಲದ ಸರದಾರ ಎಂದು ಜಗದೀಶ್ ಶೆಟ್ಟರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹಾಡಿಹೊಗಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡು ಮಾತನಾಡಿದ, ಅವರು ಸರಳ ಸಜ್ಜನ ರಾಜಕಾರಣಿ, 6 ಬಾರಿ ಶಾಸಕರಾಗಿದ್ದಾರೆ. ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದಾರೆ. 40 ವರ್ಷಗಳ ಶೆಟ್ಟರ್ ರಾಜಕೀಯ ಜೀವನದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಕೂಡ ಇಲ್ಲಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಸ್ವಾಭಿಮಾನಿ ರಾಜಕಾರಣಿಯಾಗಿರುವ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವುದಾಗಿ ಡಿ. ಕೆ. ಶಿವಕುಮಾರ್ ಜಿಗದೀಶ್ ಶೆಟ್ಟರ್ರನ್ನು ಸ್ವಾಗತಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ಜಗದೀಶ್ ಶೆಟ್ಟರ್ ಕಾಂಗ್ರೆಸ್ ತತ್ತ್ವ-ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಶೆಟ್ಟರ್ ಆರ್ ಎಸ್ ಎಸ್ ನಲ್ಲಿ ಇದ್ದರೂ ಯಾವುದೇ ವಿವಾದಕ್ಕೆ ಗುರಿಯಾದವರಲ್ಲ. ನಾನು ಸುಮಾರು 35 ವರ್ಷ ರಾಜ್ಯದಲ್ಲಿ ಇದ್ದರೂ ಯಾವತ್ತಿಗೂ ಶೆಟ್ಟರ್ ಜತೆ ಜಗಳ ಮಾಡಿಕೊಂಡಿಲ್ಲ. ಶೆಟ್ಟರ್ ಅವರು ಉತ್ತರ ಕರ್ನಾಟಕಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ" ಎಂದು ಹೇಳಿದ್ದಾರೆ.