ರಾಯಚೂರು, ಏ 16 (DaijiworldNews/HR): ಕೆಲ ನಾಯಕರು ಪಕ್ಷ ತೊರೆದಿರುವುದು ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಡ್ಯಾಮೇಜ್ ಆಗುತ್ತಿರುವುದು ನಿಜ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೆಲ ನಾಯಕರು ಪಕ್ಷ ತೊರೆದಿರುವುದು ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಡ್ಯಾಮೇಜ್ ಆಗುತ್ತಿದ್ದು, ನಾಮಪತ್ರ ಸಲ್ಲಿಕೆ ಅವಧಿಯೊಳಗೆ ಈ ಡ್ಯಾಮೇಜ್ ಕಂಟ್ರೋಲ್ ಮಾಡಲಾಗುವುದು ಎಂದರು.
ಇನ್ನು ಕಾಂಗ್ರೆಸ್ ನಲ್ಲಿ ಜಡತ್ವ ಇದೆ. ಕಾಂಗ್ರೆಸ್ ನಾಯಕರಿಲ್ಲದೆ ಖಾಲಿಯಾಗಿತ್ತು. ಈಗ ಬಿಜೆಪಿ ನಾಯಕರನ್ನು ಸೇರಿಸಿಕೊಂಡು ಪಕ್ಷ ಭರ್ತಿಯಾಗುತ್ತಿದೆ. ಎಂದು ಲೇವಡಿ ಮಾಡಿದ್ದಾರೆ.
ಈ ಬಾರಿ ಕೆಲವು ಹಿರಿಯ ನಾಯಕರಿಗೆ ಟಿಕೆಟ್ ತಪ್ಪಿದೆ. ಆದರೆ ಅವರಿಗೆ ಬೇರೆ ಉನ್ನತ ಹುದ್ದೆಗಳನ್ನು ನೀಡುವ ಭರವಸೆ ನೀಡಲಾಗಿತ್ತು. ಆದರೂ ಕೆಲ ನಾಯಕರು ಪಕ್ಷ ತೊರೆದಿದ್ದಾರೆ. ಇದರಿಂದ ಬಿಜೆಪಿ ಗೆಲುವಿಗೆ ತೊಡಕಾಗುವುದಿಲ್ಲ ಎಂದು ಹೇಳಿದ್ದಾರೆ.