ಹುಬ್ಬಳ್ಳಿ, ಏ 16 (DaijiworldNews/HR): ಟಿಕೆಟ್ ವಿಚಾರದಲ್ಲಿ ಕೊನೆ ಗಳಿಗೆಯ ವಿಸ್ಮಯ ನಡೆಯುವ ಯಾವ ವಿಶ್ವಾಸವೂ ನನಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ತರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಟಿಕೆಟ್ ವಿಚಾರದಲ್ಲಿ ಯಾವ ವಿಸ್ಮಯವೂ ನಡೆಯಲಾರದು, ನಡೆದರು ಹಿಂದೆ ಹೋಗದ ರೀತಿಯಲ್ಲಿ ನಾನು ಮುಂದೆ ಹೆಜ್ಜೆ ಇರಿಸಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪಕ್ಷದ ಉಸ್ತುವಾರಿ ಹಾಗೂ ಚುನಾವಣೆ ಉಸ್ತುವಾರಿ ಪಕ್ಷವನ್ನು ಒಲಿ ಕೊಡುವುದಕ್ಜೆ ನಿರ್ಧರಿಸಿದಂತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಅವರಿಗೆ ಇಲ್ಲಿನ ವಾಸ್ತವ ಚಿತ್ರಣ ನೀಡದೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷದ ಹಿತಾಸಕ್ತಿ ಗೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.