ಬೆಂಗಳೂರು, ಏ 15 (DaijiworldNews/MS): ವಿವಾದಾತ್ಮಕ ವಿಚಾರವಾಗಿ ಹೇಳಿಕೆ ನೀಡುತ್ತಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿ ವಿವಾದಕ್ಕೆ ಅವರ ಸಾಗರೋತ್ತರ ವೀಸಾ (Overseas citizen of india)ವನ್ನು ಕೇಂದ್ರ ಗೃಹ ಇಲಾಖೆ ರದ್ದುಗೊಳಿಸಿದೆ. ವೀಸಾ ರದ್ದು ಮಾಡುವುದಾಗಿ ನೊಟೀಸ್ ನೀಡಲಾಗಿದ್ದು ಚೇತನ್ ಅವರ ಓವರ್ಸೀಸ್ ಇಂಡಿಯನ್ ಸಿಟಿಜನ್ಶಿಪ್ ಅನ್ನು ರದ್ದು ಮಾಡುವುದಾಗಿಯೂ ಹೇಳಲಾಗಿದೆ.
ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಜಯಂತಿ ದಿನವಾದ ಏಪ್ರಿಲ್ 14ರಂದೇ ಕೇಂದ್ರ ಸರ್ಕಾರ ನನ್ನ ಓಐಸಿ(ಸಾಗರೋತ್ತರ ವೀಸಾ)ಯನ್ನು ರದ್ದುಗೊಳಿಸಿರುವುದಾಗಿ ಚೇತನ್ ಅಹಿಂಸಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಜಡ್ಜ್ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ಹೆಸರು ಉಲ್ಲೇಖಿಸಿ ಚೇತನ್ ಅಹಿಂಸಾ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ನಂತರ ಎಫ್ ಆರ್ ಆರ್ ಓ 2022ರ ಜೂನ್ ನಲ್ಲಿ ಶೋಕಾಸ್ ನೋಟಿಸ್ ಅನ್ನು ಜಾರಿ ಮಾಡಿತ್ತು.
ನಟ ಚೇತನ್ ತಮ್ಮ ಹೇಳಿಕೆಗಳ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ತಮ್ಮ ನಿಷ್ಠುರ ಟ್ವೀಟ್ಗಳಿಂದಾಗಿ ಈಗಾಗಲೇ ಎರಡು ಬಾರಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.