ಬೆಂಗಳೂರು, ಏ 15 (DaijiworldNews/HR): ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ವೈ.ಎಸ್ ವಿ ದತ್ತಾ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಕೋರ್ಟ್ಗೆ ನೀಡಿದ ಭರವಸೆಯಂತೆ ಇಂದು ಹಣ ಪಾವತಿಸಬೇಕಿತ್ತು, ಆದರೆ ಕೋರ್ಟ್ಗೆ ಗೈರಾಗಿ ಹಾಜರಾತಿಯಿಂದ ವಿನಾಯಿತಿ ಕೋರಿದ್ದರು. ಹಾಜರಾತಿಯಿಂದ ವಿನಾಯಿತಿ ನೀಡಲು ಜನಪ್ರತಿನಿಧಿಗಳ ಕೋರ್ಟ್ ನಿರಾಕರಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಇನನು ಸಿ.ಎಸ್ ಸೋಮೇಗೌಡ ಎಂಬುವರು ವೈ ಎಸ್ ವಿ ದತ್ತಾ ವಿರುದ್ಧ ಚೆಕ್ ಬೌನ್ಸ್ ಖಾಸಗಿ ದೂರು ದಾಖಲಿಸಿದ್ದರು.
ವೈಎಸ್ ವಿ ದತ್ತಾ ಏಪ್ರಿಲ್ 26 ರಂದು ಕೋರ್ಟ್ ಗೆ ಹಾಜರುಪಡಿಸಲು 42 ನೇ ಎಸಿಎಂಎಂ ಕೋರ್ಟ್ ಜಡ್ಜ್ ಜೆ. ಪ್ರೀತ್ ಆದೇಶ ನೀಡಿದ್ದಾರೆ.