ಬಳ್ಳಾರಿ, ಏ 14 (DaijiworldNews/HR): ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್.ಪೂಜಾರ ಅಲಿಯಾಸ್ ಶಾಹಿರ್ ಶೇಖ್ ಎಂಬಾತನನ್ನು ಪ್ರಕರಣವೊಂದರಲ್ಲಿ ನಾಗ್ಪುರ ಪೊಲೀಸರು ಬಂಧಿಸಿದ್ದು, ಈತ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಇದೇ ಆರೋಪಿ ಈ ಹಿಂದೆ ನಿತಿನ್ ಗಡ್ಕರಿ ಅವರ ಕೊಲೆಗೆ ಸ್ಕೆಚ್ ಹಾಕಿದ್ದ. ಈಗ ನನ್ನ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂಬ ವಿಷಯದ ಬಗ್ಗೆ ಆರಗ ಜ್ಞಾನೇಂದ್ರ ನನಗೆ ಫೋನ್ ಮಾಡಿ ತಿಳಿಸಿದರು ಎಂದರು.
ಇನ್ನು ನಾನು ಹಿಂದುತ್ವ ಪ್ರತಿಪಾದಿಸಿ ಮಾತನಾಡಿದಾಗ ಹಿಂದೊಮ್ಮೆ ನನಗೆ ಕೊಲೆ ಬೆದರಿಕೆ ಬಂದಿತ್ತು. ಈ ವಿಷಯವನ್ನು ಸದನಕ್ಕೆ ತಿಳಿಸಿದ್ದೆ. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತು. ಭದ್ರತೆ ನೀಡಿದ್ದರು. ನನ್ನ ಕೊಲೆಗೆ ಸ್ಕೆಚ್ ಹಾಕಲು ಕಾರಣ ಏನೆಂದು ನನಗೆ ಗೊತ್ತಿಲ್ಲ. ಹಿಂದುತ್ವದ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕುತ್ತಾರೆಂದರೆ ನಾನು ಹೆದರುವವರಲ್ಲ ಎಂದು ಹೇಳಿದ್ದಾರೆ.