ನವದೆಹಲಿ, ಏ 14 (DaijiworldNews/HR): ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಸಂವಿಧಾನದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ಅವುಗಳನ್ನು ಬುಡಮೇಲು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಅಂಬೇಡ್ಕರ್ ಅವರ 132ನೇ ಜಯಂತಿಯ ಹಿನ್ನೆಲೆಯಲ್ಲಿ ಟೆಲಿಗ್ರಾಫ್ಗೆ ಲೇಖನ ಬರೆದಿರುವ ಸೋನಿಯಾ ಗಾಂಧಿ, ಧರ್ಮ, ಭಾಷೆ, ಜಾತಿ ಹಾಗೂ ಲಿಂಗದ ಆಧಾರದ ಮೇಲೆ ದೇಶವನ್ನು ಒಡೆಯುತ್ತಿರುವ ಮತ್ತು ಪರಸ್ಪರ ನಡುವೆ ಜಗಳ ತಂದಿಡಲು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರೇ ನಿಜವಾದ ದೇಶದ್ರೋಹಿಗಳು ಎಂದಿದ್ದಾರೆ.
ಇನ್ನು ನಾವು ಇಂದು ಬಾಬಾಸಾಹೇಬ್ ಅವರ ಪರಂಪರೆಯನ್ನು ಗೌರವಿಸುತ್ತಿದ್ದೇವೆ. ಸಂವಿಧಾನದ ಯಶಸ್ಸು ಆಡಳಿತದ ಕರ್ತವ್ಯವನ್ನು ವಹಿಸಿದ ಜನರ ನಡವಳಿಕೆಯನ್ನು ಅವಲಂಬಿಸಿರುತ್ತದೆ ಎಂಬ ಅವರ ಪೂರ್ವಭಾವಿ ಎಚ್ಚರಿಕೆಯನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ ಎಂದರು.