ಶಿರಸಿ: ಏ.12 (DaijiworldNews/SM): ನನಗೆ ಸ್ಪರ್ಧೆ ಮಾಡುವ ಮನಸ್ಸಿದೆ ನನ್ನ ಕಾರ್ಯಕರ್ತರಿಗೆ ಮೋಸ ಮಾಡಲ್ಲ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.
ಶಿರಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಯಲ್ಲಿ ಗುರುವಾರ ರಾತ್ರಿ ರಾಜೀನಾಮೆ ಸಲ್ಲಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ವತಂತ್ರವಾಗಿ ನಿಲ್ಲಬೇಕು ಎಂಬ ಮನಸ್ಸಿದೆ ಆದರೆ ಚಿಹ್ನೆ ಬೇಕಾಗಿದೆ ಎಂಬ ಮಾತೂ ಇದೆ. ರಾಜೀನಾಮೆ ಕೊಟ್ಟ ನಂತರ ಎರಡು ದಿನದಲ್ಲಿ ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಇನ್ನು 2018ರಲ್ಲಿ ಬಿಜೆಪಿ ಸೇರಿದ್ದು, ಆಗ ಅಧಿಕಾರಕ್ಕೆ ಬರಲು ಕಾರಣ ಇರಬಹುದು. ಆದರೆ, ಈಗ ಟಿಕೆಟ್ ಗೆ ಸಾಮಾಜಿಕ ನ್ಯಾಯ ಎಂದು ಬಿಜೆಪಿಯವರು ಪ್ರಸ್ತಾಪ ಮಾಡಿದ್ದಾರೆ. ಯಡಿಯೂರಪ್ಪ ಅವರ ಶಿಷ್ಯ ಹಾಗೂ ಅವರ ಮಗ ವಿಜಯೇಂದ್ರರ ಗೆಳೆಯಗೆ ಟಿಕೆಟ್ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡುವದಿಲ್ಲ ಎಂದದಿದ್ದಾರೆ.