ಬೆಂಗಳೂರು, ಏ 13(DaijiworldNews/MS): ಪೂರ್ಣ ಆದೇಶ ಸಿದ್ಧಪಡಿಸದೆ ಅಥವಾ ಬರೆಸದೆ ಕೇವಲ ತೀರ್ಪಿನ ಕೊನೆಯ ಸಾಲನ್ನಷ್ಟೇ ಪ್ರಕಟಿಸುತ್ತಿದ್ದ ಕರ್ನಾಟಕದ ಜಾರಿ ನ್ಯಾಯಾಲಯದ ನ್ಯಾಯಾಧೀಶ ಒಬ್ಬರನ್ನು ಸುಪ್ರೀಂಕೋರ್ಟ್ ಸೇವೆಯಿಂದ ವಜಾಗೊಳಿಸಿದೆ.
ಈ ಜಡ್ಜ್ ಸಂಪೂರ್ಣ ಆದೇಶ ಸಿದ್ಧಪಡಿಸದೆ ಕೇವಲ ತೀರ್ಪಿನ ಕೊನೆಯ ಭಾಗವನ್ನು ಮಾತ್ರ ತೆರೆದ ನ್ಯಾಯಾಲಯದಲ್ಲಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಪೀಠ ಆದೇಶಿಸಿದೆ.
ಈ ಜಡ್ಜ್ನ್ನು ಹೈಕೋರ್ಟ್ನ ಪೂರ್ಣ ಪೀಠ ವಜಾಗೊಳಿಸಿದ್ದರೂ ವಿಭಾಗೀಯ ಪೀಠವು ಅವರನ್ನು ಮರುನೇಮಕಗೊಳಿಸಲು ನೀಡಿದ್ದ ಆದೇಶಕ್ಕೆ ಸುಪ್ರೀಂ ತೀವ್ರ ಅಸಮಾಧಾನ ಕೂಡ ವ್ಯಕ್ತಪಡಿಸಿದೆ.
ಜಾರಿ ನ್ಯಾಯಾಲಯದ ನ್ಯಾಯಾಧೀಶರನ್ನು ಮರುನೇಮಕ ಮಾಡಿಕೊಳ್ಳಲು ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಕೋರ್ಟ್, ಹೈಕೋರ್ಟ್ನ ವಿಭಾಗೀಯ ಪೀಠದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇಂತಹ ಪ್ರಕರಣವನ್ನು ನಾವು ಹಿಂದೆಂದೂ ನೋಡಿಲ್ಲ ಎಂದು ಈ ತೀರ್ಪು ನೀಡಿದೆ.
ಆದೇಶಗಳನ್ನೇ ಸಿದ್ಧಪಡಿಸದೆ ಕೇವಲ ತೀರ್ಪಿನ ಕೊನೆಯ ಸಾಲನ್ನು ಮಾತ್ರ ಪ್ರಕಟಿಸುವುದು ಸದರಿ ನ್ಯಾಯಾಧೀಶರ ನಿರ್ಲಕ್ಷ್ಯತನ ಹಾಗೂ ಬೇಕಾಬಿಟ್ಟಿಧೋರಣೆಯನ್ನು ವರ್ತನೆಯಾಗಿದೆ. ನ್ಯಾಯಾಂಗದ ಅಧಿಕಾರಿಯೊಬ್ಬರ ಇಂತಹ ವರ್ತನೆ ಸಹಿಸಲಸಾಧ್ಯ ಎಂದು ಹೇಳಿದೆ