ತುಮಕೂರು, ಏ 13 (DaijiworldNews/HR): ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾನು ನನ್ನ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಿದ್ದೇನೆ. ರಾಜ್ಯದ ಅಧ್ಯಕ್ಷರಿಗೆ ಇ ಮೇಲ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ' ಎಂದರು.
ಇನ್ನು 'ನನ್ನ ಅನುಭವಕ್ಕೆ ಬಂದಿರುವಂತೆ ನಾನು ಇಡೀ ಜಿಲ್ಲೆಯ ಒಳಗೆ ಇರುವ ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದೇನೆ. ಕೆಲವರು ತಮ್ಮ ಕಷ್ಟವನ್ನ ಹೇಳಿಕೊಳ್ತಾರೆ. ನಾನು ನನ್ನ ಬಂಧುಗಳಿಗೆ, ಹಿತೈಷಿಗಳಿಗೆ ಹೇಳೋದು ಇಷ್ಟೇ. ನಿಮ್ಮ ಸೇವೆ ಹಗಲು ರಾತ್ರಿ ಎನ್ನದೆ ನನಗೆ ಸಹಾಯ ಮಾಡಿದ್ದೀರಾ. ಮನಸ್ಸಿಗೆ ನೋವು ತಂದುಕೊಳ್ಳಬೇಡಿ ಎಂದು ಹೇಳಿದ್ದಾರೆ.