ಉತ್ತರ ಪ್ರದೇಶ, ಏ 13 (DaijiworldNews/HR): ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ಕಳ್ಳತನದ ಶಂಕೆಯಲ್ಲಿ 32 ವರ್ಷದ ವ್ಯಕ್ತಿಯೊಬ್ಬನನ್ನು ಹೊಡೆದು ಹತ್ಯೆಗೈದಿರುವ ಘಟನೆ ನಡೆದಿದೆ.
ವ್ಯಕ್ತಿಯನ್ನು ಕೊಂದು ಆತನ ದೇಹವನ್ನು ತನ್ನ ಬಾಸ್ನ ಆದೇಶದ ಮೇರೆಗೆ ಸರ್ಕಾರಿ ಆಸ್ಪತ್ರೆಯ ಹೊರಗೆ ಎಸೆಯಲಾಗಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ವಿಡಿಯೋದಲ್ಲಿ ಶಿವಂ ಜೋಹ್ರಿ ಎಂಬ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿದ್ದು, ವ್ಯಕ್ತಿಯೊಬ್ಬ ಶಿವಂನನ್ನು ಕಬ್ಬಿಣದ ರಾಡ್ನಿಂದ ಮನಬಂದಂತೆ ಹೊಡೆಯುತ್ತಿರುವುದನ್ನು ನೋಡಬಹುದು.
ಶಿವಂ ಕಳೆದ ಏಳು ವರ್ಷಗಳಿಂದ ಸಾರಿಗೆ ಉದ್ಯಮಿ ಬಂಕಿಮ್ ಸೂರಿ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಪ್ರಮುಖ ವ್ಯಾಪಾರದ ಕನ್ಹಿಯಾ ಹೊಸೈರಿಯ ಪ್ಯಾಕೇಜ್ ಕಾಣೆಯಾಗಿದೆ. ಕಳ್ಳತನದ ಶಂಕೆಯ ಮೇಲೆ ಹಲವಾರು ಸಾರಿಗೆ ನೌಕರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.