ಬೆಂಗಳೂರು, ಏ 13(DaijiworldNews/MS): ಭಾರತೀಯ ಜನತಾ ಪಕ್ಷವೂ 52 ಮಂದಿ ಹೊಸ ಮುಖಗಳ ಜತೆಗೆ ಮೊದಲ ಹಂತದಲ್ಲಿ 189 ಕ್ಶೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ ಬೆನ್ನಲ್ಲೇ, ಬುಧವಾರ ತಡರಾತ್ರಿ ಮತ್ತೆ 23 ಕ್ಶೇತ್ರಗಳ ಪಟ್ಟಿ ಬಿಡುಗಡೆಗೊಡಿದ್ದು 7 ಶಾಸಕರಿಗೆ ಇಲ್ಲೂ ಟಿಕೆಟ್ ತಪ್ಪಿದೆ.
ಈ ನಡುವೆ ಬಿಜೆಪಿಯಲ್ಲಿ 12 ಕ್ಷೇತ್ರಗಳಲ್ಲಿ ಇನ್ನೂ ಟಿಕೆಟ್ ಘೋಷಣೆ ಬಾಕಿಯಿರುವ ಕಾರಣ ಅಲ್ಲಿನ ಹಾಲಿ ಶಾಸಕರಲ್ಲಿ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದೆ.
ಅದರಲ್ಲಿಯೂ ಮಾಜಿ ಸಚಿವರು ಹಾಗೂ ಹಿರಿಯ ನಾಯಕರಾದ ಅರವಿಂದ ಲಿಂಬಾವಳಿ(ಮಹದೇವಪುರ), ಎಸ್.ಎ. ರಾಮದಾಸ್(ಕೃಷ್ಣರಾಜ) ಪ್ರಮುಖರಾಗಿದ್ದಾರೆ. ಅಲ್ಲದೆ, ರೋಣ ಕ್ಷೇತ್ರದ ಕಳಕಪ್ಪ ಬಂಡಿ ವಿರುದ್ಧ ಹಲವು ರೀತಿಯ ಆರೋಪಗಳಿರುವ ಕಾರಣ ಅವರಿಗೂ ಟಿಕೆಟ್ ಸಿಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಕೆಎಸ್ ಈಶ್ವರಪ್ಪ ಪ್ರತಿನಿಧಿಸುವ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಘೋಷಣೆಯನ್ನು ಇನ್ನೂ ಪೆಂಡಿಂಗ್ ಇಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿವೆ.