ಬೆಂಗಳೂರು, ಏ 12(DaijiworldNews/MS): ಆಪರೇಷನ್ ಕಮಲದಡಿ ಬಿಜೆಪಿ ಸೇರಿದ್ದ ಹಲವು ನಾಯಕರು ಕಾಂಗ್ರೆಸ್ಗೆ ಹಾರುತ್ತಾರೆ ಎನ್ನುವ ಹಲವು ದಿನಗಳ ಊಹಾಪೋಹಗಳಿಗೆ ಅಭ್ಯರ್ಥಿಗಳ ಪಟ್ಟಿ ಹೊರಬೀಳುವುದರೊಂದಿಗೆ ತೆರೆ ಬಿದ್ದಿದೆ.
ಪ್ರಮುಖವಾಗಿ ಕೆಆರ್ ಪೇಟೆ ಕ್ಷೇತ್ರದ ಸಚಿವ ನಾರಾಯಣಗೌಡರು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗಿತ್ತು. ಆದರೆ, ಅವರಿಗೆ ಹಾಲಿ ಕ್ಷೇತ್ರದಲ್ಲೇ ಬಿಜೆಪಿ ಟಿಕೆಟ್ ಕೊಟ್ಟಿದೆ. ಅದೇರೀತಿ, ಬೈರತಿ ಬಸವರಾಜು, ಗೋಪಾಲಯ್ಯ, ಎಸ್ಟಿ ಸೋಮಶೇಖರ್ ಅವರೆಲ್ಲರೂ ಕೂಡ ಕಾಂಗ್ರೆಸ್ಗೆ ವಾಪಾಸ್ ಹೋಗುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಆದರೆ ಬಿಜೆಪಿ ಅವರಿಗೆಲ್ಲ ಟಿಕೆಟ್ ಘೋಷಿಸಿರುವ ಕಾರಣ ಇನ್ನು ವಲಸಿಗರು ಕಾಂಗ್ರೆಸ್ ಸೇರುವ ಸಾಧ್ಯತೆ ತೀರಾ ಕಡಿಮೆಯಿದೆ.
ಬಿಜೆಪಿಯೂ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಉಳಿದಂತೆ 35 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಯ್ದಿರಿಸಿದೆ.ಬಿಜೆಪಿ ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.