ಉತ್ತರಪ್ರದೇಶ, ಏ 11 (DaijiworldNews/HR): ಉತ್ತರಪ್ರದೇಶದ ಲಕ್ನೋದಲ್ಲಿ ವ್ಯಕ್ತಿಯೊಬ್ಬ ಕಾನೂನು ಸಂಬಂಧಿ ದಾಖಲೆ ಪತ್ರಗಳಿಗೆ ಮೃತ ವೃದ್ದೆಯೊಬ್ಬರ ಹೆಬ್ಬೆಟ್ಟು ಗುರುತನ್ನು ತೆಗೆದುಕೊಂಡ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ವೃದ್ದೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಮೃತ ಮಹಿಳೆಯ ಹೆಬ್ಬೆಟ್ಟು ಗುರುತನ್ನು ಪಡೆದು, ಮಹಿಳೆಯನ್ನು ವಂಚಿಸುವ ಕೆಲಸ ಇದಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಕಾರಿನೊಳಗೆ ಮಲಗಿಸಿದ್ದ ಮೃತ ವೃದ್ದೆಯ ಹೆಬ್ಬೆಟ್ಟು ಗುರುತನ್ನು ವ್ಯಕ್ತಿಯೊಬ್ಬ ಬಲವಂತವಾಗಿ ತೆಗೆದುಕೊಳ್ಳುತ್ತಿರುವ ದೃಶ್ಯ ದಾಖಲಾಗಿದೆ.
ಈ ವಿಡಿಯೋ ವೈರಲ್ ಆದ ನಂತರ ಆರೋಪಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.