ನವದೆಹಲಿ, ಏ 11 (DaijiworldNews/HR): ಭಾರತದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆಯನ್ನು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯಾದ ಸ್ಕೈಮೆಟ್ ನೀಡಿದೆ.
ಲಾ ನಿನಾ(La Nina) ಪರಿಸ್ಥಿತಿಗಳ ಅಂತ್ಯ ಮತ್ತು ಎಲ್ ನಿನೊ(El Nino) ಹಿಡಿತ ಸಾಧಿಸುವ ಸಾಧ್ಯತೆಯ ಕಾರಣದಿಂದಾಗಿ ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಿದ ಒಂದು ದಿನದ ನಂತರ ಕೇಂದ್ರ ಸರ್ಕಾರದ ಮುನ್ಸೂಚನೆಯು ಬಂದಿದೆ.
ಇನ್ನು ಭಾರತದಲ್ಲಿ ಎಲ್ ನಿನೋ ಮತ್ತು ಮಾನ್ಸೂನ್ ಮಳೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (IMD) ಇಂದು ಹೇಳಿದೆ.
ಈ ವರ್ಷ ಮುಂಗಾರು ಋತುವಿನಲ್ಲಿ ಭಾರತವು ಸಾಮಾನ್ಯ ಹವಾಮಾನವನ್ನು ವೀಕ್ಷಿಸಲಿದೆ ಎಂದು ಕೇಂದ್ರ ಸರ್ಕಾರ ಇಂದು ತಿಳಿಸಿದೆ.