ಹುಬ್ಬಳ್ಳಿ, ಏ 11 (DaijiworldNews/HR): ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣರವರಿಗೆ ಟಿಕೆಟ್ ನೀಡಿದೆರೆ ಕುಟುಂಬ ರಾಜಕೀಯ ಆರೋಪ ಜತೆಗೆ ಪಕ್ಷ ಸೋಲಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷವು ಕಳೆದ ಒಂದೂವರೆ ವರ್ಷದ ಹಿಂದಿನಿಂದಲೂ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂದು ಹೇಳುತ್ತಲೇ ಬಂದಿದೆ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಿದರೆ ಅವರು ಗೆಲ್ಲುವುದಿಲ್ಲ ಎಂಬ ವಾಸ್ತವವನ್ನು ಅರಿತುಕೊಳ್ಳಬೇಕಾಗಿದೆ ಎಂದರು.
ಇನ್ನು ಕೆಲವರು ದೇವೇಗೌಡರ ಕುಟುಂಬವನ್ನು ಮುಗಿಸಬೇಕೇಂದು ಯತ್ನಿಸುತ್ತಿದ್ದಾರೆ. ಹಿತೈಷಿಗಳು ಎನ್ನಿಸಿಕೊಂಡವರೇ ಶಕುನಿಗಳ ರೂಪದಲ್ಲಿ ರೇವಣ್ಣನವರ ತಲೆಕೆಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪಕ್ಷ ಸ್ವತಂತ್ರ ವಾಗಿ ಅಧಿಕಾರಕ್ಕೆ ತರಲು ದಿನಕ್ಕೆ 15-16 ತಾಸು ಶ್ರಮಿಸುತ್ತಿದ್ದೇನೆ ನನಗೆ ಸಹಕಾರ ನೀಡುವ ಕೆಲಸ ಮಾಡಬೇಕೆ ವಿನಃ ತೊಂದರೆ ಕೊಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.