ನವದೆಹಲಿ, ಏ 11 (DaijiworldNews/HR): ಅಪ್ರಾಪ್ತ ಬಾಲಕನೊಬ್ಬನಿಗೆ ಟಿಬೆಟಿಯನ್ ಧರ್ಮಗುರು ದಲೈಲಾಮಾ ಮುತ್ತಿಟ್ಟು ತಮ್ಮ ನಾಲಿಗೆ ಚೀಪುವಂತೆ ಕೇಳಿರುವ ವಿಡಿಯೋವೊಂದು ವೈರಲ್ ಆಗಿದ ಬೆನ್ನಲ್ಲೇ ದಲೈಲಾಮಾ ಅವರು ಕ್ಷಮೆ ಕೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಬಂದಿದ್ದ ಭಾರತೀಯ ಮಗುವಿಗೆ ಮುತ್ತಿಟ್ಟು ನಂತರ, ನೀನು ನನ್ನ ನಾಲಿಗೆ ಚೀಪುವೆಯಾ ಎಂದು ದಲೈಲಾಮಾ ಕೇಳಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ವರ್ತನೆಗೆ ತೀವ್ರ ಆಕ್ಷೇಪ, ಟೀಕೆಗಳು ವ್ಯಕ್ತವಾಗಿವೆ.
ಇನ್ನು ತನ್ನ ಮಾತುಗಳಿಂದ ಅಪ್ರಾಪ್ತ ವಯಸ್ಕ ಬಾಲಕ ಮತ್ತು ಅವನ ಕುಟುಂಬಕ್ಕೆ ಉಂಟಾದ ನೋವಿಗೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.
ದಲೈ ಲಾಮಾ ಅವರ ಹಲವಾರು ಸಹಾಯಕರು ಟಿಬೆಟಿಯನ್ ಸಂಪ್ರದಾಯದ ಪ್ರಕಾರ, ಒಬ್ಬರ ನಾಲಿಗೆಯನ್ನು ಚಾಚುವುದು ಗೌರವ ಅಥವಾ ಒಪ್ಪಂದದ ಸಂಕೇತವಾಗಿದೆ ಮತ್ತು ಇದನ್ನು ಸಾಂಪ್ರದಾಯಿಕ ಟಿಬೆಟಿಯನ್ ಸಂಸ್ಕೃತಿಯಲ್ಲಿ ಶುಭಾಶಯವಾಗಿ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.