ಛತ್ತೀಸ್ಗಢ, ಏ 09 (DaijiworldNews/HR): ಬೀದಿಯಲ್ಲಿ ಬಲೂನ್ ಮಾರಾಟ ಮಾಡುವ ಹುಡುಗನಿಗೆ ಛತ್ತೀಸ್ ಗಢದ ದುರ್ಗ್ ನ ಎಸ್ಪಿ, ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ್ ಅವರು ಸಹಾಯ ಮಾಡಿದ್ದು, ಇದೀಗ ಈ ಸುದ್ದಿ ವೈರಲ್ ಆಗಿದೆ.
ಲಖಿಸರಾಯ್ ಲೈವ್ ಎಂಬ ಪೇಜ್ ಮೂಲಕ ಫೇಸ್ ಬುಕ್ ನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅಧಿಕಾರಿಗಳು ಬಲೂನ್ ಗಳನ್ನು ಮಾರುವ ಹುಡುಗನ ಪಕ್ಕದಲ್ಲಿ ನಿಂತಿರುವುದು ಕಂಡುಬರುತ್ತದೆ. ಐಪಿಎಸ್ ಅಧಿಕಾರಿ ಹುಡುಗನ ಬಳಿಗೆ ಬರುತ್ತಿದ್ದಂತೆ ಪಕ್ಕದಲ್ಲಿ ನಿಲ್ಲಿಸಿಕೊಂಡು ಅವನ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿ, ಅವನ ಬಲೂನ್-ಮಾರಾಟದ ವ್ಯವಹಾರ ಮತ್ತು ಪ್ರತಿ ಬಲೂನಿನ ಬೆಲೆಯ ಕೇಳಿ ಎಲ್ಲಾ ಬಲೂನ್ ಗಳನ್ನು ಖರೀದಿಸಿದ್ದಾರೆ
ಇನ್ನು ಐಪಿಎಸ್ ಅಭಿಷೇಕ್ ಪಲ್ಲವ್ ಈ ಮಗುವಿನ ಬಲೂನ್ ಮಾರುವ ಮುಖದಲ್ಲಿ ನಗುವನ್ನು ತಂದರು, ಪ್ರಶಂಸೆ ಗಳಿಸಿದರು ಎಂದು ವೀಡಿಯೊ ಶೀರ್ಷಿಕೆ ನೀಡಲಾಗಿದೆ.