ನವದೆಹಲಿ, ಏ 09 (DaijiworldNews/HR): ಕೋಝಿಕ್ಕೋಡ್ನಲ್ಲಿ ಚಲಿಸುತ್ತಿರುವ ರೈಲಿನಲ್ಲಿ ತನ್ನ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಶಾರುಖ್ ಸೈಫಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಗುಪ್ತಚರ ಬ್ಯೂರೋದಂತಹ ಕೇಂದ್ರೀಯ ಸಂಸ್ಥೆಗಳು ತಿಳಿಸಿದೆ.
ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕರ ಮೇಲೆ ಸೈಫಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಾಗ ಮೂವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ದೆಹಲಿಯ ಶಾಹೀನ್ ಬಾಗ್ ನಿವಾಸಿ ಶಾರುಖ್ ಸೈಫಿ ಒಬ್ಬರೇ ಕೇರಳಕ್ಕೆ ಪ್ರಯಾಣಿಸಿಲ್ಲ. ಬದಲಾಗಿ ಇಡೀ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಭಾರೀ ದಾಳಿ ನಡೆಸುವ ಉದ್ದೇಶದಿಂದ ಕೇರಳಕ್ಕೆ ಕರೆತರಲಾಗಿತ್ತು ಎನ್ನಲಾಗಿದೆ.
ಇನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ನಾಲ್ವರು ಸದಸ್ಯರ ತಂಡ ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ವಿಚಾರಣೆ ನಡೆಸಿದ್ದು, ಘಟನೆಗೆ ಭಯೋತ್ಪಾದಕರ ನಂಟು ಇದೆ ಎಂದು ಶಂಕಿಸಿರುವುದನ್ನು ಸ್ಮರಿಸಬಹುದಾಗಿದೆ. ಆದರೆ,ಕೇಂದ್ರೀಯ ಸಂಸ್ಥೆ ತನಿಖೆಯನ್ನು ಅಧಿಕೃತವಾಗಿ ವಹಿಸಿಕೊಂಡಿಲ್ಲ.