ಪೂಂಚ್/ಜಮ್ಮು, ಏ 09 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಿಂದ ಒಳ ನುಸುಳಲು ಉಗ್ರಗಾಮಿಗಳ ಗುಂಪು ನಡೆಸಿದ ಪ್ರಯತ್ನವನ್ನು ಸೇನಾ ಪಡೆಗಳು ಗುಂಡಿನ ದಾಳಿ ನಡೆಸುವ ಮೂಲಕ ಇಂದು ಬೆಳಗ್ಗೆ ವಿಫಲಗೊಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಇಂದು ನಸುಕಿನ ಜಾವ ಷಾಪುರ ಸೆಕ್ಟರ್ನಲ್ಲಿ ಸೇನಾ ಪಡೆಗಳು ಗಸ್ತು ತಿರುಗುತ್ತಿದ್ದಾಗ ನಿಯಂತ್ರಣ ರೇಖೆಯ ಬಳಿ ಉಗ್ರರ ಚಲನವಲನವನ್ನು ಪತ್ತೆ ಮಾಡಿದರು ಎಂದು ತಿಳಿಸಿದ್ದಾರೆ.
ಇನ್ನು ಉಗ್ರರು ಮತ್ತು ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ಬಹಳಷ್ಟು ಹೊತ್ತು ನಡೆಯಿತು. ತರುವಾಯ ಉಗ್ರರ ಗುಂಪನ್ನು ಹಿಮ್ಮೆಟ್ಟಿಸಲಾಯಿತು ಎಂದು ಹೇಳಿದ್ದಾರೆ.