ತಿರುವನಂತಪುರ, ಏ 9 (DaijiworldNews/MS): ಕೊವೀಡ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಕೇರಳ ಸರ್ಕಾರವು ವೃದ್ಧರು ಮತ್ತು ಗರ್ಭಿಣಿಯರಿಗೆ ಮಾಸ್ಕ್ ಕಡ್ಡಾಯಗೊಳಿಸಿದೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಶನಿವಾರ ಉನ್ನತ ಮಟ್ಟದ ಸಭೆಯನ್ನು ನಡೆಸಿದ ಬಳಿಕ ಮಾತನಾಡಿದ ಅವರು "ಹೆಚ್ಚಿನ COVID-19 ಸಾವುಗಳು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮತ್ತು ಮಧುಮೇಹದಂತಹ ಕಾಯಿಲೆ ಇರುವವರಲ್ಲಿ ವರದಿಯಾಗುತ್ತಿವೆ ಎಂದು ಹೇಳಿದರು.
"ನಾವು ಪರೀಕ್ಷೆಯನ್ನು ಹೆಚ್ಚಿಸಿದ್ದೇವೆ.ಆಸ್ಪತ್ರೆಯ ದಾಖಲಾತಿ ಪ್ರಕರಣಗಳು ಸ್ವಲ್ಪ ಹೆಚ್ಚಾಗುತ್ತಿವೆ. ಅದರೂ ಒಟ್ಟು ಪ್ರಕರಣಗಳಲ್ಲಿ, ಕೇವಲ 0.8% ರೋಗಿಗಳಿಗೆ ಆಮ್ಲಜನಕದ ಬೆಂಬಲದ ಅಗತ್ಯವಿರುತ್ತದೆ ಮತ್ತು 1.2% ರಷ್ಟು ICU ಗಳಲ್ಲಿ ದಾಖಲಾಗಿದ್ದಾರೆ" ಎಂದು ಅವರು ಹೇಳಿದರು.