ಬಂಡೀಪುರ, ಏ 9 (DaijiworldNews/MS): ಹುಲಿ ಯೋಜನೆಯ 50ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರ ತಲುಪಿ ಹುಲಿ ಸಂರಕ್ಷಿತ ಅರಣ್ಯದಲ್ಲಿಭಾನುವಾರ ಬೆಳ್ಳಂಬೆಳಗ್ಗೆ ಸಫಾರಿ ನಡೆಸಿದ ಪ್ರಧಾನಿ ಮೋದಿಯವರು ಬಂಡೀಪುರ ಕ್ಯಾಂಪ್ ನ, ವನ್ಯಜೀವಿ, ಅರಣ್ಯ ಸಂಪತ್ತಿನ ಸೌಂದರ್ಯ ಸವಿದರು.
ಬೆಳಿಗ್ಗೆ ಸುಮಾರು 7.20ರಲ್ಲಿ ಬಂಡೀಪುರ ಹೊರ ವಲಯದ ಮೇಲುಕಾಮನಹಳ್ಳಿಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ಗೆ ಮೋದಿಯವರಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು ಪ್ರಧಾನಿ ಅವರನ್ನು ಹಿರಿಯ ಅರಣ್ಯಾಧಿಕಾರಿಗಳಾದ ಡಿಡಿಜಿ ಸುಬ್ರಹ್ಮಣ್ಯ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಐಜಿಪಿ ಮುರಳಿ ಸ್ವಾಗತಿಸಿದರು.
ಖಾಕಿ ಬಣ್ಣದ ಟೀ-ಶರ್ಟ್ ಹಾಗೂ ಪ್ಯಾಂಟ್ ಧರಿಸಿರುವ ಮೋದಿ ಅವರು, ಕಪ್ಪು ಟೋಪಿ ಮತ್ತು ಕಪ್ಪು ಬೂಟುಗಳನ್ನು ಸಹ ಧರಿಸಿದ್ದಾರೆ. ಫೋಟೋದಲ್ಲಿ, ಪ್ರಧಾನಿ ಕೈಯಲ್ಲಿ ಅರ್ಧ ಜಾಕೆಟ್ನೊಂದಿಗೆ ಮಿಂಚಿದರ ಹೆಲಿಕಾಪ್ಟರ್ ನಿಂದ ಇಳಿದು ಕಾರಿನಲ್ಲಿ ಬಂಡೀಪುರದ ಹಳೆಯ ಸ್ವಾಗತ ಕೇಂದ್ರಕ್ಕೆ ತೆರಳಿದರು.
ಸನಿಹದಲ್ಲೇ ಇರುವ ತಮಿಳುನಾಡಿನ ಮದುಮಲೈ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಕಾವಾಡಿ ದಂಪತಿ ಬೊಮ್ಮ ಮತ್ತು ಬೆಳ್ಳಿಯನ್ನು ಭೇಟಿ ಮಾಡಲಿದ್ದಾರೆ.