ಇಂದೋರ್, ಏ 08 (DaijiworldNews/MS): ಅರ್ಧಂಬರ್ಧ ಉಡುಪು ತೊಟ್ಟ ಹುಡುಗಿಯರು ರಾಮಾಯಣದ ರಾಕ್ಷಸಿ 'ಶೂರ್ಪನಖಿ' ಕಾಣುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೇಳಿಕೆ ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಸೃಷ್ಟಿಸಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಹನುಮ ಮತ್ತು ಮಹಾವೀರ ಜಯಂತಿಯಂದು ಆಯೋಜಿಸಲಾದ ಧಾರ್ಮಿಕ ಸಮಾರಂಭದಲ್ಲಿ ಅವರು ನೀಡಿದ ಹೇಳಿಕೆ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಮಹಿಳೆಯರು ಕೆಟ್ಟ ರೀತಿಯಲ್ಲಿ ಬಟ್ಟೆ ತೊಡುವುದರಿಂದ ಅವರಲ್ಲಿ ‘ದೇವತೆ’ಯ ಚಿತ್ರ ಕಾಣಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ನಾನು ಹೊರಗೆ ಹೋಗುವಾಗ ಅನೇಕ ಯುವಕ - ಯುವತಿಯರು ಕುಡಿದ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ. ಅಮಲೇರಿದ ಸ್ಥಿತಿಯಲ್ಲಿ ಡ್ಯಾನ್ಸ್ ಮಾಡುವುದನ್ನು ನೋಡಿದಾಗ ಅವರೆಲ್ಲರ ನಶೆ ದೂರವಾಗಲು 5-7 ಬಾರಿ ಕಪಾಳಮೋಕ್ಷ ಮಾಡುವಂತೆ ಅನಿಸುತ್ತದೆ ಯುವತಿಯರು ಕೆಟ್ಟ ಉಡುಪುಗಳಿಂದ 'ಶೂರ್ಪನಖಿ' ಹಾಗೆ ಕಾಣುತ್ತಾರೆ’ ಎಂದು ಹೇಳಿದ್ದಾರೆ.
ನಾವು ಮಹಿಳೆಯರಲ್ಲಿ ದೇವಿಯನ್ನು ಕಾಣುತ್ತೇವೆ. ದೇವರು ನಿಮಗೆ ಒಳ್ಳೆಯ ಮತ್ತು ಸುಂದರವಾದ ದೇಹವನ್ನು ಕೊಟ್ಟಿದ್ದಾನೆ. ಅದನ್ನು ಒಳ್ಳೆಯ ಉಡುಪುಗಳನ್ನು ಧರಿಸಿ . ಪೋಷಕರು ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳಬೇಕು’ ಎಂದು ಹೇಳಿದ್ದಾರೆ.