ನವದೆಹಲಿ, ಏ 07 (DaijiworldNews/MS):ಗೃಹಬಳಕೆಯ ಪಿಎನ್ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್ಜಿ ತೈಲದ ದರ ನಿಗದಿಪಡಿಸಲು ಸರ್ಕಾರವು ಗುರುವಾರ ಹೊಸ ವಿಧಾನವನ್ನು ಅನುಮೋದಿಸಿರುವುದರಿಂದ ಇದು ದೇಶಾದ್ಯಂತ ಗ್ರಾಹಕರಿಗೆ ಅನುಕೂಲ ಕಲ್ಪಿಸಲಿದೆ. ಇದರಿಂದಾಗಿ ಸಿಎನ್ಜಿ ತೈಲದ ದರವು ಶೇ 10ರಷ್ಟು ಅಗ್ಗವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯ ನಂತರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೊಸ ಸೂತ್ರದಂತೆ ಈ ಇಂಧನಗಳ ದರವನ್ನು ಈಗಿನಂತೆ ದ್ವೈವಾರ್ಷಿಕದ ಬದಲಿಗೆ ಪ್ರತಿ ತಿಂಗಳು ಪರಿಷ್ಕರಣೆ ಮಾಡ ಲಾಗುತ್ತದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.
ಇದರಿಂದಾಗಿ ಸಿಎನ್ಜಿ ತೈಲದ ದರವು ಶೇ 10ರಷ್ಟು ಕಡಿಮೆಯಾಗಲಿದ್ದು, ಸಿಎನ್ಜಿ ವೆಚ್ಚವನ್ನು ಶೇಕಡಾ 6-9 ರಷ್ಟು ಕಡಿಮೆ ಆಗಲಿದೆ ಇದು ಏಪ್ರಿಲ್ 8 ರಿಂದ (ಶನಿವಾರ) ಜಾರಿಗೆ ಬರಲಿದೆ ಎಂದು ಠಾಕೂರ್ ಹೇಳಿದರು.