ಚೆನ್ನೈ, ಏ 06 (DaijiworldNews/HR): ತಮಿಳುನಾಡಿನ ಕೈನೂರುನಲ್ಲಿ ಹಾವಿಗೆ ಹಿಂಸೆ ನೀಡಿದ ಆರೋಪದ ಮೇಲೆ ಮೂವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮೋಹನ್, ಸೂರ್ಯ ಮತ್ತು ಸಂತೋಷ್ ಬಂಧಿತ ಆರೋಪಿಗಳಗಿದ್ದು, ಅವರು ಹಾವೊಂದನ್ನು ಹಿಡಿದು ಅದನ್ನು ಹಿಂಸಿಸಿ ಅದರ ಸಾವಿಗೆ ಕಾರಣರಾಗಿದ್ದಾರೆ.
ಇನ್ನು ಮೋಹನ್ ಎಂಬಾತ ಕೈಯಲ್ಲಿ ಹಾವು ಹಿಡಿದುಕೊಂಡಿದ್ದು, ಹಾವು ಮೋಹನ್ ಕೈಗೆ ಕಚ್ಚಿದೆ. ಇದಕ್ಕೆ ಮೋಹನ್ ಹಾವು ನನ್ನ ಕೈಗೆ ಕಚ್ಚಿದೆ. ನಾನು ಅದರ ಸೇಡು ತೀರಿಸಿಕೊಳ್ಳಬೇಕೆಂದು ಹಾವಿನ ತಲೆ ಕಚ್ಚಿದ್ದಾನೆ. ಇತರರು ಹಾವನ್ನು ಬಿಡು ಎಂದಿದ್ದಾರೆ. ಆದರೆ ಮೋಹನ್ ಹಾವಿನ ತಲೆಯನ್ನು ಕಚ್ಚಿ, ಹಿಂಸಿಸಿ ಅದನ್ನು ಸಾಯಿಸಿದ್ದಾನೆ. ಹಾವು ನೋವಿನಲ್ಲಿ ಒದ್ದಾಟ ನಡೆಸಿದರೂ ಅದನ್ನು ನೋಡಿ ಸ್ನೇಹಿತರು ನಕ್ಕಿದ್ದಾರೆ.
ಈ ಘಟನೆಯ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಆಪ್ಲೋಡ್ ಮಾಡಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ಹಿಂಸೆ ಮತ್ತು ಕಾಡು ಪ್ರಾಣಿಯನ್ನು ಕೊಂದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ.