ನವದೆಹಲಿ, ಏ 06 (DaijiworldNews/HR): "ಆರ್ಬಿಐಯು ಯಾವುದೇ ರೆಪೋ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ ಶೇ.6.5ರಷ್ಟು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ" ಎಂದು ಆರ್ಬಿಐನ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಮಾಹಿತಿ ನೀಡಿರುವ ಅವರು, "ಆರ್ಬಿಐನಿಂದ ರೆಪೋ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ ಶೇ.6.5ರಷ್ಟು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ" ಎಂದು ತಿಳಿಸಿದ್ದಾರೆ.
ಇನ್ನು ಹಣದುಬ್ಬರವು ಅಸ್ಥಿರವಾಗಿ ಮುಂದುವರಿಯುತ್ತಿರುವುದರಿಂದ, ಆರ್ಬಿಐ ಗುರುವಾರ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದ್ದು, ಕೇಂದ್ರ ಬ್ಯಾಂಕ್ ಈಗಾಗಲೇ ಮೇ 2022 ರಿಂದ ಒಟ್ಟು 250 ಬಿಪಿಎಸ್ ರೆಪೊ ದರವನ್ನು ಹೆಚ್ಚಿಸಿದೆ.
ಫೆಬ್ರವರಿ ಆರಂಭದಲ್ಲಿ ನಡೆದ ಕಳೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ, ಆರ್ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಿಂದ ಶೇಕಡಾ 6.5 ಕ್ಕೆ ಹೆಚ್ಚಿಸಲು ನಿರ್ಧರಿಸಿತು. ಮೇ 2022 ರಿಂದ ಇಲ್ಲಿಯವರೆಗೆ, ಆರ್ಬಿಐ ಬ್ಯಾಂಕುಗಳಿಗೆ ಸಾಲ ನೀಡುವ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ.
ರೆಪೋ ದರ ಎಂದರೆ ಆರ್ಥಿಕತೆಯ ಹಲವಾರು ಹಣಕಾಸಿನ ಗುರಿಗಳನ್ನು ಸಾಧಿಸಲು ಮಾನ್ಯತೆ ಪಡೆದ ವಾಣಿಜ್ಯ ಬ್ಯಾಂಕ್ಗಳಿಗೆ ದೇಶದ ಕೇಂದ್ರ ಬ್ಯಾಂಕ್ ಹಣವನ್ನು ನೀಡುವ ಬಡ್ಡಿ ದರವಾಗಿದೆ.