ಬೆಂಗಳೂರು, ಏ 04 (DaijiworldNews/MS): ಕರ್ನಾಟಕ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ತೊಡಗಿಸಿಕೊಂಡಿದ್ದು, ಏ.8 ರಂದು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಲಿದೆ ಎಂದು ಹೇಳಿದೆ.
ಇದರ ಮಧ್ಯೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ವ್ಯಾಪಕ ಚರ್ಚೆಗಳು ಆಗುತ್ತಿವೆ.ಪಕ್ಷದ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೆಸರಿನಲ್ಲಿ ಅಭ್ಯರ್ಥಿಗಳ ನಕಲಿ ಪಟ್ಟಿಯನ್ನು ಸೃಷ್ಟಿಸಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ಧಾರೆ. ಈ ಪಟ್ಟಿ ವೈರಲ್ ಆಗುತ್ತಿರುವುದು ಬಿಜೆಪಿ ನಾಯಕರ ಗಮನಕ್ಕೆ ಬಂದಿದ್ದು, ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು, ನಮ್ಮ ಪಕ್ಷವು ಆಂತರಿಕ ಪ್ರಜಾಪ್ರಭುತ್ವವನ್ನು ಗೌರವಿಸಿ, ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಈ ಸಮಯದಲ್ಲಿ ಸುಳ್ಳು ಅಭ್ಯರ್ಥಿಗಳ ಪಟ್ಟಿ ಹರಿಬಿಟ್ಟು ಕುತ್ಸಿತ ಮನಸ್ಥಿತಿಗಳು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ವ್ಯಂಗ್ಯವಾಡಿದ ಕಾಂಗ್ರೆಸ್
ಪಟ್ಟಿ ನಕಲಿ ಪಟ್ಟಿ ವೈರಲ್ ಹಿಂದೆ ಬಿಜೆಪಿಯೂ ಕಾಂಗ್ರೆಸ್ ನತ್ತ ಬೊಟ್ಟು ಮಾಡಿದ್ದು, ಇದಕ್ಕೆ "ತಾನೇ ಗುಜರಾತ್ ಮಾದರಿ ಅನುಸರಿಸಿ ಕ್ಷೇತ್ರ ಬದಲಾವಣೆ ಮಾಡೋದು,ತಾನೇ ಲಿಸ್ಟ್ ರಿಲೀಸ್ ಮಾಡೋದು,ಆಮೇಲೆ ಆಕಾಂಕ್ಷಿಗಳ, ಬೆಂಬಲಿಗರ ಪ್ರತಿಭಟನೆ ತಾಳಲಾರದೇ, ತಾನೇ ಅದನ್ನು ಫೇಕ್ ಅಂತ ಕರೆಯೋದು!ಅಭ್ಯರ್ಥಿಗಳ ಮೊದಲ ಪಟ್ಟಿ ಹಿಂಪಡೆಸಿ “ಸಂತೋಷ” ಪಡುತ್ತಿರೋದು ಯಾರು?ಪಟ್ಟಿ ಹಿಂಪಡೆದಿದ್ದು ಶಿಕಾರಿಪುರದಲ್ಲಿ ವಿಜಯೇಂದ್ರ ಹೆಸರು ಬಂದಿದ್ದಕ್ಕಾ?" ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.