ಬೆಂಗಳೂರು, ಮಾ (DaijiworldNews/HR): "ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪ್ರಚಾರದ ವಿಷಯವಾಗಲಿದ್ದು, ಇದು ರಾಜ್ಯದಲ್ಲಿ ಬಿಜೆಪಿ ಸರಕಾರದ ಸೋಲಿಗೆ ಕೊಡುಗೆ ನೀಡುತ್ತದೆ" ಎಂದು ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ರಾಜ್ಯದಲ್ಲಿ ಕಾಂಗ್ರೆಸ್ಗೆ ಬೆಂಬಲ ಇದೆ ಮತ್ತು ಭ್ರಷ್ಟಾಚಾರ ವಿಷಯಗಳ ಬಗ್ಗೆ ಪಕ್ಷದ ಪ್ರಚಾರವು ಕೆಲಸ ಮಾಡಿದೆ, ಆದರೆ ಬಿಜೆಪಿ ಪ್ರಬಲ, ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ" ಎಂದರು.
ಇನ್ನು "ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ ನಂತರ, ಸೂರತ್ ನ್ಯಾಯಾಲಯದ ಶಿಕ್ಷೆ ವಿಧಿಸಿರುವುದು ನಮಗೆ ಪ್ರಚಾರದ ವಿಷಯವಾಗಿದೆ" ಎಂದಿದ್ದಾರೆ.
"ಅನರ್ಹತೆಯ ವಿಷಯ ರಾಜ್ಯದಲ್ಲಿ ಕಾಂಗ್ರೆಸ್ನ ರಾಜಕೀಯ ಲಾಭಕ್ಕೆ ಕಾರಣವಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ದೇಶದ ಎಲ್ಲೆಡೆ ಇದೆ, ಸೇಡಿನ ರಾಜಕೀಯ ಉತ್ತುಂಗದಲ್ಲಿದೆ ಎಂದು ತೋರಿಸುತ್ತದೆ" ಎಂದು ಹೇಳಿದ್ದಾರೆ.