ಇಂದೋರ್, ಮಾ (DaijiworldNews/HR): ಮಧ್ಯಪ್ರದೇಶದ ಇಂದೋರ್ನಲ್ಲಿರುವ ರಾಮನವಮಿಯಂದು ಬೆಳೇಶ್ವರ ಮಹಾದೇವ್ ದೇವಸ್ಥಾನದ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ 36 ಮಂದಿ ಮೃತಪಟ್ಟಿರುವ ಬೆನ್ನಲ್ಲೇ ದೇವಸ್ಥಾನವನ್ನು ಕೆಡವಲು ಐದಕ್ಕೂ ಹೆಚ್ಚು ಬುಲ್ಡೋಜರ್ಗಳೊಂದಿಗೆ ಇಂದು ಅಧಿಕಾರಿಗಳು ಆಗಮಿಸಿದ್ದಾರೆ.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಗೌಪ್ಯವಾಗಿ ಕ್ರಮ ಕೈಗೊಂಡ ಮಹಾನಗರ ಪಾಲಿಕೆ ತಂಡ ದೇವಸ್ಥಾನದ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಿದೆ.
ಇನ್ನು ದೇವಸ್ಥಾನವನ್ನು ಕೆಡಗುವ ವೇಳೆ ಯಾವುದೇ ಅವಘಡ ನಡೆಯದಂತೆ ಪೊಲೀಸ್ ಠಾಣೆಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಘಟನಾ ಸ್ಥಳದಲ್ಲಿ ಉಪ ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಇದ್ದಾರೆ.
200 ವರ್ಷಗಳಷ್ಟು ಹಳೆಯದಾದ ಮೆಟ್ಟಿಲುಬಾವಿಯನ್ನು ನಾಲ್ಕು ಕಬ್ಬಿಣದ ಗರ್ಡರ್ಗಳು, ಕಾಂಕ್ರೀಟ್ನ ತೆಳುವಾದ ಪದರ ಮತ್ತು ಜನಸಮೂಹದ ಭಾರವನ್ನು ತಡೆದುಕೊಳ್ಳಲು ಸಾಧ್ಯವಾಗದ ಹೆಂಚುಗಳಿಂದ ಮುಚ್ಚಲಾಗಿತ್ತು.