ದಾಂತೇವಾಡಾ, ಏ 01(DaijiworldNews/HR): ನಕ್ಸಲರ ಗುಂಪೊಂದು ಪ್ರಯಾಣಿಕರ ಬಸ್ಗೆ ಬೆಂಕಿ ಹಚ್ಚಿದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯ ಮಾಲೆವಾಹಿ ಪ್ರದೇಶದಲ್ಲಿ ನಡೆದಿದೆ.
ಬಸ್ ದಾಂತೇವಾಡದಿಂದ ಸುಕ್ಮಾಗೆ ತೆರಳುತ್ತಿದ್ದಾಗ ಮಾಲೆವಾಹಿ ಬಳಿ ನಕ್ಸಲರು ಬಸ್ ತಡೆದು ಬಸ್ಗೆ ಬೆಂಕಿ ಹಚ್ಚಿ, ಯಾರಿಗೂ ತಪ್ಪಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಬೆಂಕಿಯ ಕೆನ್ನಾಲಗೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.
ಇನ್ನು ಘಟನೆಯನ್ನು ರಾಜಕೀಯ ನಾಯಕರು ಖಂಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ದಾಳಿಯನ್ನು ಖಂಡಿಸಿದ್ದು, ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.