ಬೆಂಗಳೂರು, ಏ 01 (DaijiworldNews/MS): ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದ ಸಿನಿಮಾ ನಿರ್ಮಾಪಕ ಕೆ. ಮಂಜುಗೆ ಬಿಗ್ ಶಾಕ್ ಎದುರಾಗಿದೆ.
ಮಂಜು ಹೇಳಿಕೆ ಬೆನ್ನಲ್ಲೇ ಜೆಡಿಎಸ್ ಮುಖಂಡ ಬಂಜಾರಪಾಳ್ಯ ಮಂಜುನಾಥ್ 'ನನ್ನ ಮಗ ಕಾರ್ತಿಕ್ ಗೌಡಗೆ ಪದ್ಮನಾಭನಗರದ ಟಿಕೆಟ್ ಫೈನಲ್ ಆಗಿದೆ. ದೇವೇಗೌಡರೇ ಈ ಬಗ್ಗೆ ತೀರ್ಮಾನ ಮಾಡಿ ಆಗಿದೆ’ ಎಂದು ಹೇಳಿದ್ದಾರೆ.
ಮಂಜುಗೆ ಜೆಡಿಎಸ್ ಟಿಕೆಟ್ ಯಾರು ಫೈನಲ್ ಆಗಿರುವ ಭರವಸೆ ಯಾರು ನೀಡಿದ್ದಾರೆ ಎಂಬುದು ಗೊತ್ತಿಲ್ಲ. ನಾನು 30 ವರ್ಷ ದಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ನನಗೆ ಟಿಕೆಟ್ ಬೇಡ, ನನ್ನ ಮಗನಿಗೆ ಟಿಕೆಟ್ ನೀಡಲು ದೇವೇಗೌಡರನ್ನ ಕೇಳಿದ್ದೆ. ನನ್ನ ಮಗನಿಗೆ ಟಿಕೆಟ್ ಫೈನಲ್ ಆಗಿದೆ. ಕೆ. ಮಂಜು ಜೆಡಿಎಸ್ ನಿಂದ ಸ್ಪರ್ಧೆ ಅಸಾಧ್ಯ. ಈ ಬಗ್ಗೆ ದೇವೇಗೌಡರ ಬಳಿಯೂ ಮಾತನಾಡುವುದಾಗಿ' ತಿರುಗೇಟು ನೀಡಿದ್ದಾರೆ.