ನವದೆಹಲಿ, ಏ 01 (DaijiworldNews/HR): ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ವಾಣಿಜ್ಯ ಬಳಕೆಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿದ್ದು, 92 ರೂಪಾಯಿ ಇಳಿಕೆ ಮಾಡಿದೆ.
ಏಪ್ರಿಲ್ 1 ನೂತನ ಆರ್ಥಿಕ ವರ್ಷದ ಆರಂಭವಾಗಿದ್ದು, ಇಂದಿನಿಂದ ಬೇರೆ ಬೇರೆ ಹೊಸ ನಿಯಮಗಳು ಜಾರಿಯಾಗಿದ್ದು, ಕಾರುಗಳ ದರ ದುಬಾರಿಯಾಗಲಿದೆ. ಔಷಧಗಳ ಬೆಲೆ ಇಳಿಕೆಯಾಗಲಿದ್ದು, ಹೊಸ ತೆರಿಗೆ ಪದ್ಧತಿ ಜಾರಿಯಾಗಲಿದೆ.
ಇನ್ನು ಇಂದಿನಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 92 ರೂಪಾಯಿ ಇಳಿಕೆ ಮಾಡಿದೆ. ಆದರೆ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 350 ರೂಪಾಯಿ ಹೆಚ್ಚಳ ಮಾಡಿದ್ದು, ಇದೀಗ ಏಪ್ರಿಲ್ ನಲ್ಲಿ 92 ರೂಪಾಯಿ ಇಳಿಕೆ ಮಾಡಿದೆ.
ಮುಂಬೈಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,980 ರೂಪಾಯಿ ಹಾಗೂ ಚೆನ್ನೈಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,192.50 ರೂಪಾಯಿ. ಕೋಲ್ಕತಾದಲ್ಲಿ 19ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,132 ರೂಪಾಯಿ ಆಗಿದೆ.