ಮುಂಬೈ, ಮಾ 30 (DaijiworldNews/HR): ಒಂದು ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ 10 ವರ್ಷದ ಬಾಲಕಿಯ ಹೊಟ್ಟೆಯಲ್ಲಿ 100 ಗ್ರಾಂ ತೂಕದ ಕೂದಲು ಉಂಡೆ ಪತ್ತೆಯಾಗಿರುವ ಘಟನೆ ಮುಂಬೈಯ ದಾದರ್ ನಲ್ಲಿ ನಡೆದಿದೆ.
ನನ್ನ ಮಗಳಿಗೆ ಮಧ್ಯಂತರ ಹೊಟ್ಟೆ ನೋವು ಇತ್ತು. ಅದು ಕಾಲಾನಂತರದಲ್ಲಿ ಹದಗೆಟ್ಟಿತು. ಆಕೆಗೆ ಔಷಧಿ ನೀಡಿದರೂ ನೋವು ನಿಲ್ಲದ ಕಾರಣ ನಾವು ಚಿಂತಾಕ್ರಾಂತರಾಗಿದ್ದೆವು. ನಾವು ಅನೇಕ ವೈದ್ಯರನ್ನು ಸಂಪರ್ಕಿಸಿದ್ದೇವೆ. ಆದರೆ ಅವರು ಚಿಕಿತ್ಸೆ ನೀಡಿದರೂ ಪ್ರಯೋಜನಕಾರಿಗುತ್ತಿರಲಿಲ್ಲ. ನಮ್ಮ ಮಗಳ ಹೊಟ್ಟೆಯಲ್ಲಿ ಕೂದಲು ಇರುವ ಬಗ್ಗೆ ತಿಳಿದಾಗ ನಾವು ಆಘಾತಕ್ಕೆ ಒಳಗಾದೆವು ಎಂದು ಬಾಲಕಿಯ ತಾಯಿ ಹೇಳಿದರು.
ಇನ್ನು ಬಾಯಿ ಜೆರ್ಬೈ ವಾಡಿಯಾ ಆಸ್ಪತ್ರೆಯ ವೈದ್ಯರು ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಿಂದ 100 ಗ್ರಾಂ ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ.
ಒಂದು ವರ್ಷದಿಂದ ಬಾಲಕಿ ತನ್ನ ಕೂದಲನ್ನು ತಿನ್ನುತ್ತಿದ್ದರೂ ಮನೆಯವರಿಗೆ ತಿಳಿದಿರಲಿಲ್ಲ. 9 ವರ್ಷ ವಯಸ್ಸಿನಲ್ಲೇ ಋತುಮತಿಯಾದ ಕಾರಣ ಬಾಲಕಿಯು ಪಿರಿಯಡ್ ಮೆಡಿಕಲ್ ತೆಗೆದುಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.