ಬೆಂಗಳೂರು, ಮಾ 29 (DaijiworldNews/SM): 'ಮೋದಿ' ಉಪನಾಮ ಟೀಕೆ ವಿಚಾರವಾಗಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರತಿನಿಧಿಸುವ ಕ್ಷೇತ್ರ ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯ ಸಂದರ್ಭ ಮಾಹಿತಿ ನೀಡಿದ ಆಯೋಗದ ಅಧಿಕಾರಿ ರಾಜೀವ್ ಕುಮಾರ್ ಅವರು, ಸೂರತ್ ನ ನ್ಯಾಯಾಲಯ ಪ್ರಕರಣವೊಂದರಲ್ಲಿ ಕಾಂಗ್ರೆಸ್ನ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಅವರನ್ನು ಸಚಿವಾಲಯವು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದೆ ಅಧಿಸೂಚನೆ ಹೊರಡಿಸಿತು. ಈ ಅನರ್ಹತೆ ಕುರಿತಂತೆ ರಾಹುಲ್ ಗಾಂಧಿಯವರು ವಯನಾಡು ಕ್ಷೇತ್ರದಲ್ಲಿ ಯಾವುದೇ ಉಪಚುನಾವಣೆ ಸದ್ಯಕ್ಕೆ ನಡೆಸುವ ಚಿಂತನೆ ಇಲ್ಲ. ಈ ಬಗ್ಗೆ ಚುನಾವಣೆ ಆಯೋಗದಿಂದ ಯಾವುದೇ ಆತುರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಚಾರಣಾ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಪ್ರಕರಣ ಕುರಿತಂತೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಆದ್ದರಿಂದ ಅವರು ಕೇರಳದ ವಯನಾಡಿನಲ್ಲಿ ಉಪಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ನೀಡಿರುವ ನಿರ್ದಿಷ್ಟ ಪರಿಹಾರ ಖಾಲಿ ಮಾಡಬೇಕು. ಅಲ್ಲಿಯವರೆಗೆ ಚುನಾವಣೆ ಆಯೋಗ ಯಾವುದನ್ನು ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.