ನವದೆಹಲಿ, ಮಾ 29 (DaijiworldNews/DB): ಚುನಾವಣಾ ಆಯೋಗವು ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ಘೋಷಿಸಿದೆ. ಆದರೆ ರಾಹುಲ್ ಗಾಂಧಿಯವರ ಅನರ್ಹತೆಯಿಂದ ತೆರವಾಗಿರುವ ವಯನಾಡ್ ಲೋಕಸಭಾ ಕ್ಷೇತ್ರಿಕ್ಕೆ ಉಪ ಚುನಾವಣೆ ಘೋಷಿಸಿಲ್ಲ.
ವಯನಾಡ್ ಸಂಸದರಾಗಿದ್ದ ರಾಹುಲ್ ಗಾಂಧಿಯವರು ಮಾನನಷ್ಟ ಮೊಕ್ಕದ್ದಮೆಯಲ್ಲಿ ನ್ಯಾಯಾಲಯದಿಂದ ದೋಷಿ ಎಂದು ಘೋಷಿಸಿದ ಬಳಿಕ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರಲ್ಲದೆ, ಅವರ ಲೋಕಸಭಾ ಸದಸ್ಯತ್ವವೂ ಅನರ್ಹಗೊಂಡಿತ್ತು. ರಾಹುಲ್ ಅನರ್ಹತೆಯಿಂದ ಈ ಕ್ಷೇತ್ರ ತೆರವಾಗಿದೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಇಂದು ಉಪ ಚುನಾವಣೆಯನ್ನು ಘೋಷಿಸಿದೆ. ಆದರೆ ವಯನಾಡ್ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಿಸಿಲ್ಲ.
ಯಾವುದೇ ಒಂದು ಕ್ಷೇತ್ರ ತೆರವಾದರೆ ಅದಕ್ಕೆ ಮರು ಚುನಾವಣೆ ಘೋಷಣೆ ಮಾಡಲು ಆರು ತಿಂಗಳ ಕಾಲಾವಕಾಶವಿರುತ್ತದೆ. ಇನ್ನು ರಾಹುಲ್ ಪ್ರಕರಣದಲ್ಲಿ ಅಪೀಲು ಸಲ್ಲಿಸಲು ವಿಚಾರಣಾ ನ್ಯಾಯಾಲಯವು ಒಂದು ತಿಂಗಳ ಕಾಲಾವಕಾಶ ನೀಡಿರುವುದರಿಂದ ವಯನಾಡ್ ಕ್ಷೇತ್ರಕ್ಕೆ ಚುನಾವಣೆ ಘೋಷಣೆಗೆ ಅವಸರ ಏನಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.