ಬೆಂಗಳೂರು, ಮಾ 29 (DaijiworldNews/DB): ನಾವು ಚುನಾವಣೆಗೆ ಮೂರು ತಿಂಗಳ ಮೊದಲೇ ತಯಾರಾಗಿದ್ದೇವೆ. ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೇರುವುದು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಬಿಜೆಪಿ 60ರಿಂದ 65 ಸ್ಥಾನ ಗೆಲ್ಲಬಹುದು. ನಾವು ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯವರು ಮಾಡಿದ ತಪ್ಪನ್ನು ಸರಿ ಮಾಡುತ್ತೇವೆ ಎಂದರು.
ಗ್ಯಾರಂಟಿ ಭರವಸೆಯನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳುತ್ತದೆ. ಯಾರು ಬೋಗಸ್ಸು ಎಂಬುದು ಚುನಾವಣೆ ಬಳಿಕ ತಿಳಿಯಲಿದೆ. ನಮ್ಮ ಅಭ್ಯರ್ಥಿಗಳನ್ನೆಲ್ಲಾ ಕರೆದುಕೊಂಡು ಹೋಗಿ ಅವರು ಸರ್ಕಾರ ಮಾಡಿದ್ದೇ ಹೊರತು ಅದು ಬಿಜೆಪಿ ಸರ್ಕಾರ ಅಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ನವರಿಂದಾಗಿ ನಡೆದ ಸಮ್ಮಿಶ್ರ ಸರ್ಕಾರ ಇದು ಎಂದು ವ್ಯಂಗ್ಯವಾಡಿದರು.
ಕಾನೂನಿಗೆ ವಿರುದ್ದವಾದ ಕೆಲಸವನ್ನೇ ಬಿಜೆಪಿಯವರು ಮಾಡಿದ್ದಾರೆ. ಎಲ್ಲಾ ವರ್ಗದವರಿಗೂ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ.