ಮುಂಬಯಿ, ಮಾ 29 (DaijiworldNews/DB): ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ಉರುಳಿಸಲು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್ 150 ಸಭೆ ನಡೆಸಿದ್ದರು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ತಾನಾಜಿ ಸಾವಂತ್ ಆರೋಪಿಸಿದ್ದಾರೆ.
ಮುಂಬಯಿಯಲ್ಲಿ ಮಾತನಾಡಿದ ಅವರು, ಉದ್ದವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರ್ಕಾರ ಪತನದಲ್ಲಿ ಫಡ್ನವಿಸ್ ಪಾತ್ರ ತುಂಬಾ ಇದೆ. ಶಿಂಧೆ ಮತ್ತು ಫಡ್ನವಿಸ್ ಅವರು ಹಲವಾರು ಸಭೆ ನಡೆಸಿದ್ದಾರೆ. 150 ಸಭೆ ನಡೆಸಿದ ಬಗ್ಗೆ ನನಗೆ ಮಾಹಿತಿ ಇದೆ ಎಂದರು.
ಉದ್ದವ್ ಸಂಪುಟದಲ್ಲಿ ಶಿಂಧೆ ಸಚಿವ ಸ್ಥಾನ ಬಯಸಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ನೀಡದಕ್ಕೆ ಬಂಡಾಯವೆದ್ದರು. ಅವರ ಬಂಡಾಯದೊಂದಿಗೆ ಸರ್ಕಾರ ಉರುಳಿಸಲು ಫಡ್ನವಿಸ್ ಜೊತೆ ಕೈಜೋಡಿಸಿದರು ಎಂದು ಆಪಾದಿಸಿದರು.
ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮತ್ತು ಕಾಂಗ್ರೆಸ್ ಮೈತ್ರಿಕೂಟವಾದ ಮಹಾ ವಿಕಾಸ್ ಆಘಾಡಿ ಸರ್ಕಾರ 2022 ರ ಜೂನ್ನಲ್ಲಿ ಪತನಗೊಂಡಿತ್ತು. ಬಳಿಕ ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ, ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಹೊಸ ಸರ್ಕಾರ ರಚಿಸಿದ್ದರು.