ಬೆಳಗಾವಿ, ಮಾ 28 (DaijiworldNews/HR): ಡಿ.ಕೆ ಶಿವಕುಮಾರ್ ಅವರು ಕಳೆದ ಎರಡು ಮೂರು ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡಿ ಟಿಕೆಟ್ ಭರವಸೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ಹತಾಶೆಯಿಂದ ನಮ್ಮ ಪಕ್ಷದವರನ್ನು ಸಂಪರ್ಕಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ ಎನ್ನುವುದಕ್ಕೆ ಇದೆ ಸಾಕ್ಷಿ ಎಂದರು.
ಇನ್ನು ಎಸ್ ಡಿಪಿಐ ಸಂಘಟನೆಯಿಂದ ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಎಸ್ ಡಿಪಿಐನವರು ನನನ್ನು ಹೊಗಳಲು ಸಾಧ್ಯನಾ? ಎಸ್ ಡಿಪಿಐ ಒಂದು ದೇಶದ್ರೋಹಿ ಸಂಘಟನೆ. ಅವರು ದೇಶದ ವಿರುದ್ಧ ಚಟುವಟಿಕೆ ಮಾಡುವವರು. ಭಾರತದ ದೇಶದ ಅಲ್ಪಸಂಖ್ಯಾತರ ವಿರೋಧಿಗಳೇ ಎಸ್ ಡಿಪಿಐ ನವರು ಎಂದು ವಾಗ್ದಾಳಿ ನಡೆಸಿದ್ದಾರೆ.