ನವದೆಹಲಿ, ಮಾ 28 (DaijiworldNews/HR): ಭಾರತದ ಮೊದಲ 'ಗೀರ್' ತಳಿಯ ಕರುವಿನ ಸಂತಾನವನ್ನು ಸೃಷ್ಟಿಸಿದ್ದು, ಇದಕ್ಕೆ ಗಂಗಾ ಎಂದು ನಾಮಕರಣ ಮಾಡಲಾಗಿದೆ.
ಹರ್ಯಾಣದ ಕರ್ನಾಲ್ನಲ್ಲಿರುವ ಎನ್ ಡಿಆರ್ಐ ದೇಶೀಯ ಹಸುವಿನ ತಳಿಗಳಾದ ಗೀರ್ ಮತ್ತು ಸಾಯಿವಾಲ್ ಗಳ ತದ್ರೂಪಿ ಸಂತಾನ ಸೃಷ್ಟಿಸಲು ಕಾರ್ಯನಿರ್ವಹಿಸುತ್ತಿದ್ದು, ಇದು 32 ಕೆಜಿ ತೂಕವಿರುವುದಾಗಿ ರಾಷ್ಟ್ರೀಯ ಡೈರಿ ಸಂಶೋಧನಾ ಇನ್ಸ್ ಟಿಟ್ಯೂಟ್ ಪ್ರಕಟನೆಯಲ್ಲಿ ತಿಳಿಸಿದೆ.
ಇನ್ನು ದೇಶೀಯ ಗೋ ತಳಿಯ ತದ್ರೂಪಿಯನ್ನು ಸೃಷ್ಟಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಹೊರಟಿರುವ ಎನ್ ಡಿಆರ್ ಐ ಇದೀಗ ದೇಶದ ಮೊದಲ ದೇಶೀಯ ಹಸುವಿನ ತಳಿಯಾದ ಗೀರ್ ತದ್ರೂಪಿ ಸಂತಾನವನ್ನು ಯಶಸ್ವಿಯಾಗಿ ಸೃಷ್ಟಿಸಿದಂತಾಗಿದೆ.