ನವದೆಹಲಿ, ಮಾ 27 (DaijiworldNews/HR): ಅಮೇರಿಕಾದ ಮಂಗೋಲಿಯನ್ ಮಗುವನ್ನು ಹಿರಿಯ ಬೌದ್ಧ ನಾಯಕ ದಲೈ ಲಾಮಾ ಅವರು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಹೆಸರಿಸಿದ್ದಾರೆ.
ದಲೈ ಲಾಮಾ ಎಂಟು ವರ್ಷದ ಬಾಲಕನೊಂದಿಗೆ ಮಾರ್ಚ್ 8 ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದು, ಈ ಸಮಯದಲ್ಲಿ ಸುಮಾರು 600 ಮಂಗೋಲಿಯನ್ನರು ತಮ್ಮ ಹೊಸ ಆಧ್ಯಾತ್ಮಿಕ ನಾಯಕನನ್ನು ಆಚರಿಸಲು ಒಟ್ಟುಗೂಡಿದರು.
ಇನ್ನು ಎಂಟು ವರ್ಷ ವಯಸ್ಸಿನ ಈ ಬಾಲಕ ಅಮೆರಿಕಾದಲ್ಲಿ ಜನಿಸಿದ ಮಗುವಿಗೆ ಅವಳಿ ಸಹೋದರನಿದ್ದು, ಈತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮಗ ಮತ್ತು ಮಂಗೋಲಿಯನ್ ಸಂಸತ್ತಿನ ಮಾಜಿ ಸದಸ್ಯನ ಮೊಮ್ಮಗ ಎಂದು ವರದಿಯಾಗಿದೆ.