ನವದೆಹಲಿ, ಮಾ 26 (DaijiworldNews/HR): ನೀರವ್ ಮೋದಿ ಮತ್ತು ಲಲಿತ್ ಮೋದಿಯಂತಹ ಪರಾರಿಯಾಗಿರುವ ವಂಚಕರನ್ನು ಟೀಕಿಸಿದರೆ ಬಿಜೆಪಿ ಪಕ್ಷಕ್ಕೆ ಏಕೆ ನೋವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ರಾಜ್ಘಾಟ್ನ ಹೊರಗೆ ಕಾಂಗ್ರೆಸ್ನ ದಿನವಿಡೀ ನಡೆದ ಸಂಕಲ್ಪ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಇದು ಕೇವಲ ಒಂದು ಸತ್ಯಾಗ್ರಹ ಆದರೆ ದೇಶದಾದ್ಯಂತ ಹಲವಾರು ಸತ್ಯಾಗ್ರಹಗಳು ನಡೆಯುತ್ತವೆ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯವನ್ನು ಉಳಿಸಲು ನಾವು ಯಾವುದೇ ತ್ಯಾಗವನ್ನು ಮಾಡುತ್ತೇವೆ ಎಂದರು.
ಇನ್ನು ಪ್ರಜಾಪ್ರಭುತ್ವವನ್ನು ಉಳಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನೊಂದಿಗೆ ನಿಂತಿದ್ದಕ್ಕಾಗಿ ಎಲ್ಲಾ ವಿರೋಧ ಪಕ್ಷಗಳಿಗೆ ಧನ್ಯವಾದ ಎಂದು ಹೇಳಿದ್ದಾರೆ.