ನವದೆಹಲಿ, ಮಾ 24 (DaijiworldNews/MS): 2018 ರಲ್ಲಿ ಸಂಸತ್ತಿನಲ್ಲಿ ಅಧಿವೇಶನ ವೇಳೆ ಪ್ರಧಾನಿ ನರೇಂದ್ರ ಮೋದಿ ’ ಸೂರ್ಪನಖಿ’ ಎಂದು ಸಂಬೋಧಿಸಿದ್ದರು ಎನ್ನಲಾದ ಘಟನೆ ಹಿನ್ನಲೆಯಲ್ಲಿ ಪ್ರಧಾನಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೇಳಿದ್ದಾರೆ.
ಮೈಕ್ರೋ ಬ್ಲಾಗಿಂಗ್ ಟ್ವಿಟರ್ನಲ್ಲಿ ಹಳೆಯ ವೀಡಿಯೊವನ್ನು ಹಂಚಿಕೊಂಡಿರುವ ಮಾಜಿ ಕೇಂದ್ರ ಸಚಿವರು, ಪ್ರಧಾನಿ ಮೋದಿ ಅವರನ್ನು ಹೇಳಿರುವ ವಿಚಾರವನ್ನು ನೆನೆಸಿಕೊಂಡಿದ್ದಾರೆ. 'ನ್ಯಾಯಾಲಯಗಳು ಎಷ್ಟು ತ್ವರಿತವಾಗಿ ವಿಚಾರಣೆ ನಡೆಸುತ್ತವೆ ಎಂದು ನೋಡೋಣ' ಎಂದು ಕೇಂದ್ರದ ಮಾಜಿ ಸಚಿವೆಯೂ ಆಗಿರುವ ಅವರು ಟ್ವೀಟ್ ಮಾಡಿದ್ದಾರೆ.
ರಾಮಾಯಣ ಧಾರಾವಾಹಿ ಪ್ರಸಾರವಾಗುತ್ತಿದ್ದ ಕೆಲ ದಿನಗಳ ಬಳಿಕ ರೇಣುಕಾಚೌಧರಿ ಮಾತು ಮುಂದುವರಿಸಲು ಅವಕಾಶ ನೀಡುವಂತೆ ರಾಜ್ಯಸಭೆಯ ಅಧ್ಯಕ್ಷರಿಗೆ ನರೇಂದ್ರ ಮೋದಿ ಕೇಳಿಕೊಳ್ಳುತ್ತಿರುವ ತುಣುಕನ್ನು ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಗುವುದು ಕೇಳಿಸುತ್ತಿದೆ. 2019ರ ಮಾನನಷ್ಟ ಪ್ರಕರಣದಲ್ಲಿ ರಾಹುಲ್ಗಾಂಧಿಗೆ ಶಿಕ್ಷೆಯಾದ ಬಳಿಕ ಚೌಧರಿ ಟ್ವೀಟ್ ಮಾಡಿದ್ದಾರೆ.
"ಮೋದಿ ಮಾತನಾಡಿದ್ದು 2018ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಎಲ್ಲಿಯೂ ಕೇಸ್ ಹಾಕದ ನೀವು ಈಗ ದೂರು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ರೇಣುಕಾ ಚೌಧರಿ ವಿರುದ್ದ ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.