ಚಿಕ್ಕಮಗಳೂರು, ಮಾ. 23 (DaijiworldNews/HR): ಟಿಪ್ಪು ಕಾಲದಲ್ಲಿ ಇದ್ದಿದ್ರೆ ನಾನೇ ಉರಿಗೌಡ, ನಂಜೇಗೌಡ ತರ ನಿಲ್ಲುತ್ತಿದ್ದೆ. ಇತಿಹಾಸದಲ್ಲಿ ಮತಾಂಧನ ವಿರುದ್ಧ ಕತ್ತಿ ಎತ್ತಿದವನು ಎನಿಸಿಕೊಳ್ಳುತ್ತಿದ್ದೆ ಹೊರತು ಹೇಡಿ ಆಗುತ್ತಿರಲಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಸಿ.ಟಿ.ರವಿ, ಅಶ್ವಥ್ ನಾರಾಯಣ್ ಉರೀಗೌಡ-ನಂಜೇಗೌಡ ಎಂಬ ಕಾಂಗ್ರೆಸ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ಹೌದು ನಾವು ಅವರೇ. ನಮಗೆ ಅದು ಖುಷಿ ಮತ್ತು ಹೆಮ್ಮೆಇದೆ. ಗುಲಾಮಿ ಮಾನಸೀಕತೆಯಲ್ಲಿ ಬದುಕುವ ಜನರಿಗಿಂತ ಹಾಗೇ ಕರೆಸಿಕೊಳ್ಳುವುದು ಒಳ್ಳೆಯದು ಎಂದರು.
ಇನ್ನು ಇಂದು ಟಿಪ್ಪು ಇದ್ದಿದ್ದರೆ ಆಂಜನೇಯ ದೇವಸ್ಥಾನವನ್ನ ಮಸೀದಿ ಮಾಡಿದರೆ ಸುಮ್ನಿರ್ತಿದ್ವಾ, ಕೆಲವರು ಸತ್ಯ ಗೊತ್ತಿದ್ರು ಹೇಡಿಗಳಂತೆ ಬದುಕಿದ್ರು, ವೋಟಿನ ಆಸೆಗೆ ಒಪ್ಪಿಕೊಳ್ಳಲು ತಯಾರಿರಲಿಲ್ಲ, ನಾವು ಸತ್ಯವನ್ನು ಪ್ರತಿಪಾದನೆ ಮಾಡಿದೆವು ಎಂದು ಹೇಳಿದ್ದಾರೆ.