ವಿಶಾಖಪಟ್ಟಣ, ಮಾ. 23 (DaijiworldNews/HR): ವಿಶಾಖಪಟ್ಟಣಂನ ರಾಮಜೋಗಿಪೇಟೆಯಲ್ಲಿ ಮೂರು ಅಂತಸ್ತಿನ ಕಟ್ಟಡ ಒಮ್ಮೆಲೇ ಕುಸಿದು ಬಿದ್ದ ಪರಿಣಾಮವಾಗಿ ಇಬ್ಬರು ಸಾವನ್ನಪ್ಪಿದ್ದು, ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಘಟನೆ ನಡೆದಿದೆ.
ಶಿಥಿಲಗಳಡಿ ಮಗುವಿನ ಶವ ಪತ್ತೆಯಾಗಿದ್ದು, ಗಾಯಗೊಂಡಿರುವವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇನ್ನು ಸ್ಥಳಕ್ಕಾಗಮಿಸಿದ ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ.